
ಗದಗನಲ್ಲಿ ಗವಿಶ್ರೀಗಳ ಆಶೀರ್ವಚನ ಭಾಗ ೧
ವ್ಯಕ್ತಿ, ಶಕ್ತಿಯಾಗಲು ಸದ್ವಿಚಾರ ಸತ್ಸಂಗ ಪ್ರೇರಕ
ಕರುನಾಡ ಬೆಳಗು ಸುದ್ದಿ
ಗದಗ, ೨೫ – ಶರಣರ ಸತ್ಸಂಗದಲ್ಲಿರುವದೇ ಜ್ಞಾನದ ಮೂಲವಾಗಿದ್ದು, ಸದ್ವಿಚಾರ, ಸತ್ಸಂಗದ ಅಳವಡಿಕೆಯಿಂದ ಮಾತ್ರ ವ್ಯಕ್ತಿಯೋರ್ವ ಶಕ್ತಿಯಾಗಿ ಬೆಳೆಯಲು ಸಾಧ್ಯವೆಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಆಯೋಜಿಸಲಾದ ಆಧ್ಯಾತ್ಮ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾನವನ ಮನವಿಂದು ಕೆಸರಿನ ಗೋಡೆಯಂತಾಗಿದ್ದು, ಬದುಕಿನಲ್ಲಿ ಕೆಲವನ್ನು ಬಲ್ಲವರಿಂದ, ಶಾಸ್ತç್ತಗಳಿಂದ, ಮತ್ತೆ ಕೆಲವನ್ನು, ನೋಡಿ ಸುಜ್ಞಾನದಿಂದ, ಸಜ್ಜನರ ಸಂಘದಿAದ ಅರಿತು ಬಾಳಿದಾಗ ಮನವು ತಿಳಿಗೊಂಡು ಕೆಸರಿನಿಂದ ಮುಕ್ತಿ ಪಡೆಯುವದು ಸಾಧ್ಯವಾಗಲಿದೆ.
ಮೈ, ಮಾತು, ಮನಸ್ಸು ಹೊಲಸು ಮಾಡಿಕೊಳ್ಳದೇ ಬದುಕು ಕಟ್ಟಿಕೊಂಡವರು ಬಲ್ಲವರೆಂದಪರಿಗಣಿಸಲ್ಪಡುತ್ತಾರೆ. ಒಳ್ಳೆಯದನ್ನು ಕಲಿಯುವ ಮನವಿದ್ದಲ್ಲಿ ವಿಶ್ವವೇ ಗುರುವಾಗಲಿದೆ. ಮಕ್ಕಳಿಗೆ ಆಸ್ತಿ ಬಿಟ್ಟು ಹೋದವನು ತಂದೆಯಲ್ಲ. ಆದರ್ಶ ಬಿಟ್ಟು ಹೋದವನು ತಂದೆ ಎನ್ನುವದನ್ನು ಮಾನವ ಅರಿತು ಸಾಗಬೇಕಿದೆ.
ಜ್ಞಾನದಿಂದ ಕಲ್ಯಾಣ ಕಟ್ಟಿದ ಶರಣರ ವಚನ ಗಂಗೆಯಲ್ಲಿ ಮಿಂದಾಗ ಮನದ ಮೈಲಿಗೆ ಕಳೆದು ಉತ್ತಮವಾದ ಜ್ಞಾನದ ಬದುಕು ರೂಪಗೊಳ್ಳಲಿದೆ. ಜ್ಞಾನ ಭಗವಂತನ ಸುಂದರ ಸೃಷ್ಠಿಯಾಗಿದ್ದು, ಬದುಕು ಕಟ್ಟಿಕೊಳ್ಳುವ ಕಲೆ ಅರಿತಾಗ ಮಾನವ ಜೀವನ ಸಾರ್ಥಕವಾಗಲಿದೆ. ಮನದ ಸ್ಮೃತಿಗಳಿಂದ ಮುಕ್ತವಾಗಿ ಅಂತರಂಗದ ಜ್ಞಾನದ ಮಹತ್ವ ಅರಿತು ನಡೆದಾಗ ಬದುಕು ಬೆಳಗಲಿದೆ ಎಂದರು.