
ಗದಗನಲ್ಲಿ ಗವಿ ಶ್ರೀಗಳ ಪ್ರವಚನ ಭಾಗ –೬
ಪ್ರೇಮಭರಿತ ಹೃದಯ, ಭಕ್ತಿಪ್ರಿಯ ಭಗವಂತನ ನೆಲೆ
ಕರುನಾಡ ಬೆಳಗು ಸುದ್ದಿ
ಗದಗ, – ಪ್ರೇಮಭರಿತ ಹೃದಯದಲ್ಲಿ ಮಾತ್ರ ಭಕ್ತಿಪ್ರಿಯ ಭಗವಂತನÀ ನೆಲೆಯಾಗಲಿದ್ದಾನೆ ಎಂದು ಕೊಪ್ಪಳ ಗವಿ ಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಸಂಜೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಆಯೋಜಿಸಲಾಗಿರುವ ಆಧ್ಯಾತ್ಮ ಪ್ರವಚನದಲ್ಲಿ ನೆರೆದ ಭಕ್ತರಿಗೆ ಪ್ರವಚನ ನೀಡಿ ಮಾತನಾಡಿದರು. ಸರ‍್ಯ, ಚಂದ್ರ ಹಾಗೂ ನಕ್ಷತ್ರಗಳನ್ನು ತಾಳ್ಮೆಯಿಂದ ಕೆತ್ತಿದ ಶಿಲ್ಪಿ ಯಾರು ಎನ್ನುವುದನ್ನು ಅರಿಯಬೇಕಿದೆ. ಮೊಬೈಲ್‌ನ ಟವರ್ ಬಾರದ ಸ್ಥಳಗಳಲ್ಲಿ ತನ್ನ ಪಾವರ್ ತೋರುವ ರ‍್ವಶಕ್ತನ ದಿವ್ಯ ಪ್ರಭಾವಗಳಿಂದ ಶರಣಾಗುವುದೇ ಭಕ್ತಿಯಾಗಿದೆ. ಪವಿತ್ರ ಪ್ರೇಮ, ಭಕ್ತಿಯ ಉತ್ತಮ ಭಾವವಾಗಿವೆ. ಪ್ರೇಮವಿಲ್ಲದ ಹೃದಯ, ಮಕರಂದವಿಲ್ಲದ ಪ್ಲಾಸ್ಟಿಕ್ ಹೂವಿನ ಮಾದರಿಯಾಗಿದೆ.
ವ್ಯವಹಾರಿಕ ಪ್ರೇಮ ಮತ್ತು ವ್ಯವಹಾರಿಕ ಭಕ್ತಿ ಮಾನವ ಕೌಟುಂಬಿಕ ಸಂಬಂಧಗಳು ಹದಗೆಡಲು ಕಾರಣವಾಗಿವೆ. ಮಾನವ ಸಮಾಜ ವಿಷಯದ ವಾಸನೆಯ ಮೋಹದಲ್ಲಿ ಮುಳುಗಿದೆ. ದೇಶಮುಕ್ತನಾಗಿ ಪರಿಪರ‍್ಣ ಪ್ರೇಮದೊಂದಿಗೆ ಬದುಕುವುದೇ ಪ್ರೇಮವಾಗಿದ್ದು, ಪ್ರೇಮವೇ ರ‍್ಮವಾಗಿದೆ ಎಂದರು.