5

ಗದಗನಲ್ಲಿ ಗವಿ ಶ್ರೀಗಳ ಪ್ರವಚನ ಭಾಗ-೭
ರಾಷ್ಟ, ವಿಕಸನಕ್ಕೆ “ಡು ಬಿಫೋರ್ ಡೈ” ಕ್ರಿಯಾಶೀಲ ಮನಸ್ಸು ಅವಶ್ಯ

ಕರುನಾಡ ಬೆಳಗು ಸುದ್ದಿ
ಗದಗ, – ದೇಶದ ವಿಕಸನಕ್ಕಾಗಿ ಇಂದು “ಡು ಬಿಫೋರ್ ಡೈ” ಮನಸ್ಥಿತಿಯ ರಾಷ್ಟç ಕಟ್ಟುವ ಕ್ರಿಯಾಶೀಲ ಮನಸ್ಸುಗಳ ಅವಶ್ಯಕತೆ ಇದೆ ಎಂದು ಕೊಪ್ಪಳ ಗವಿ ಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಶನಿವಾರ ಸಂಜೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಆಯೋಜಿಸಲಾಗಿರುವ ಆಧ್ಯಾತ್ಮ ಪ್ರವಚನದಲ್ಲಿ ನೆರೆದ ಭಕ್ತರಿಗೆ ಪ್ರವಚನ ನೀಡಿ ಮಾತನಾಡಿದರು. ಉಪ ಜೀವನಕ್ಕಾಗಿ, ಉಪಕಾರ ಸ್ಮರಣೆಗಾಗಿ ಮತ್ತು ದೇಶ ಹಾಗೂ ವಿಶ್ವದ ವಿಕಸನಕ್ಕಾಗಿ ಪ್ರಾಮಾಣಿಕ ಕೆಲಸ ಮಾಡಬೇಕಿದೆ. ದುಡಿದು ಬದುಕುವುದನ್ನು ಮನುಷ್ಯ ನಿಸರ್ಗದಿಂದ ಕಲಿಯಬೇಕಿದೆ. ದೇವ ಬರೆದ ಹಣೆಬರಹವನ್ನು ಶ್ರಮದ ಬೆವರ ಹನಿಗಳಿಂದ ಅಳಿಸಿ ಹಾಕಬಹುದಾಗಿದೆ.
ಅಜ್ಜ, ತಂದೆ ದುಡಿದಿಟ್ಟ ಹಣದಲ್ಲಿ ತಿನ್ನುವ ಅನ್ನ ಹಳಸಲು ಆಹಾರವಾಗಿದೆ.

ಮತ್ತೊಬ್ಬರನ್ನು ವಂಚಿಸಿ ಗಿಟ್ಟಿಸುವ ಆಹಾರ ಎಂಜಲಿಗೆ ಸಮಾನವಾಗಿದೆ. ಆದರೆ ಮನುಷ್ಯ ಶ್ರಮದಿಂದ ನಡೆಸಿದ ಕಾಯಕದ ಅನ್ನ ಪ್ರಸಾದಕ್ಕೆ ಸಮಾನವಾಗಿದೆ. ನಾಡಿಗೆ ಸಧ್ಯದ ಪರಿಸ್ಥಿತಿಯಲ್ಲಿ ಲಕ್ಷ ದೀಪೋತ್ಸವಗಳಿಗಿಂತ ವೃಕ್ಷ ದೀಪೋತ್ಸವದ ಅವಶ್ಯಕತೆ ವ್ಯಾಪಕವಾಗಿದೆ. ಇಷ್ಟಪಟ್ಟು ಮಾಡುವ ಕಾರ್ಯ ಯೋಗವಾಗಿದೆ. ಶ್ರಮದ ಬೆವರಿನ ಕೆಲಸ ಸತ್ಯ ಹಾಗೂ ಶುದ್ಧವಾಗಿರುತ್ತದೆ. ದುಡಿದು ಬದುಕುವುದನ್ನು ಕಲಿಸಿದ ಶಿಕ್ಷಣ ಮನುಷ್ಯನನ್ನು ಸ್ವಾವಲಂಬನೆಯತ್ತ ಕರೆದೊಯ್ಯಲಿದೆ. ಆಲಸ್ಯವೇ ನಮ್ಮ ಶತ್ರುವಾಗಿದ್ದು, ಪ್ರಯತ್ನಶೀಲತೆ ಮತ್ತು ಕಾರ್ಯಶೀಲತೆಯಿಂದ ಬದುಕಿದಾಗ ಮನುಷ್ಯ ದೇವನಾಗಲಿದ್ದಾನೆ ಎಂದರು.

Leave a Reply

Your email address will not be published. Required fields are marked *

error: Content is protected !!