
ಗರ್ಭಿಣಿ ಬಾಣಂತಿ ಮಕ್ಕಳ ರಕ್ಷಣೆಗೆ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 9- ಸುರಕ್ಷಿತ ಹೆರಿಗೆ ಮತ್ತು ಬಿಸಿಲಿನ ತಾಪ ಜಾಗೃತಿ ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಕರೂರು ವ್ಯಾಪ್ತಿಯ ಉಪ ಕೇಂದ್ರ ಶಾನುವಾಸಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಅವರು ಮಾತನಾಡಿ ಸುರಕ್ಷಿತ ಹೆರಿಗೆಯಿಂದಾಗುವ ಪ್ರಯೋಜನಗಳು ಮತ್ತು ಬಿಸಿಲಿನ ತಾಪದಿಂದ ಗರ್ಭಿಣಿ ಬಾಣತಿ ಮಕ್ಕಳ ರಕ್ಷಣೆ ಆರೋಗ್ಯದ ಕಾಳಜಿ ಕುರಿತು ಆರೋಗ್ಯ ಶಿಕ್ಷಣದ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಈರಪ್ಪ ನಾಯಕ ರವರು ಸುಸೂತ್ರವಾದ ಹೆರಿಗೆಗೆ ಸುರಕ್ಷಿತ ಸ್ಥಳ ಅಂದರೆ ಆಸ್ಪತ್ರೆ ಆದ್ದರಿಂದ ಹೆರಿಗೆಗಳನ್ನು ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಿ ಇದರಿಂದ ತಾಯಿ ಮಗುವಿನ ರಕ್ಷಣೆಯಾಗುತ್ತದೆ. ಸಿಸ್ಟರ್ ಮತ್ತು ಆಶಾರವರ ಮಾತನ್ನು ತಪ್ಪದೇ ಕೇಳಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಸುರಕ್ಷತಾಧಿಕಾರಿ ಶ್ರೀಮತಿ ಶ್ವೇತ ಸಮುದಾಯ ಆರೋಗ್ಯ ಅಧಿಕಾರಿ ಪ್ರಭಾವತಿ ಆರೋಗ್ಯ ನಿರೀಕ್ಷಣಾಧಿಕಾರಿ ಉರುಕುಂದಪ್ಪ ಆರ್ ಎಚ್ ಪಾಸಿಟಿವ್ ಬಿಜಿನೆಸ್ ಮ್ಯಾನೇಜರ್ ಅಪ್ಸರ್ ಬೇಗ್ ಹಾಗೂ ಶರಣಪ್ಪ ಮತ್ತು ಆಶಾ ಕಾರ್ಯಕರ್ತೆ ಹಾಜರಿದ್ದರು.