
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸ 2024
ಗವಿಸಿದ್ಧೇಶ್ವರ ಜಾತ್ರೆಗೆ ಸುತ್ತುರು ಶ್ರೀಗಳಿಂದ ಚಾಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 08 – ನಾಡಿನ ಐತಿಹಾಸಿಕ ಪ್ರಸಿದ್ದ ಕೊಪ್ಪಳದ ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಮಹಾ ರಥೋತ್ಸವ ಇದೇ ಜ. 27 ರಂದು ಜರುಗಲಿದೆ.
ರಥೋತ್ಸವಕ್ಕೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಭಾರತದ ಪ್ರಮುಖ ಆಧ್ಯಾತ್ಮ ಕೇಂದ್ರಗಳಲ್ಲಿಒಂದಾದ ಸುತ್ತೂರ ಮಠದ ಪೀಠಾಧ್ಯಕ್ಷರಾಗಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಚಾಲನೆ ನೀಡಲಿದ್ದಾರೆ .
ಐತಿಹಾಸಿಕ ಕ್ಷಣಕ್ಕೆ ದಿನಗಣನೆ ಆರಂಭವಾಗಿದ್ದು ಶ್ರೀಗಳ ಚಾಲನೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಸಾಕ್ಷರತೆ, ಆಧ್ಯಾತ್ಮ ಹಾಗೂ ಆರೋಗ್ಯ ರಕ್ಷಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕ್ರಾಂತಿ ಮಾಡಿರುವ ಪೂಜ್ಯರ ಆಗಮನಕ್ಕೆ ಭಕ್ತಕೋಟಿ ಸಾಕ್ಷಿಯಾಗಲಿದೆ.