
ಗಾಂಜಾ ಸಮಸ್ಯೆ ನಿಯಂತ್ರಣಕ್ಕೆ ಸೂಚನೆ
ಕರುನಾಡ ಬೆಲಗು ಸುದ್ದಿ
ಕೊಪ್ಪಳ, ೦೭- ರಾಜ್ಯ ಹಾಗೂ ಜಿಲ್ಲೆಯಲ್ಲಿ ಗಾಂಜಾ ಸಮಸ್ಯೆ ಹೆಚ್ಚಾಗುತ್ತಿದೆ ಇಲಾಖೆಗೆ ಇದು ಸವಾಲಾಗಿದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಪೋಲಿಸ್ ಇಲಾಖೆಯ ಬೆಂಗಳೂರು ಹೆಚ್ಚುವರಿ ಮಾಹ ನಿರ್ದೇಶಕ ಆಲೋಕ್ ಕುಮಾರ್ ಎಚ್ಚರಿಸಿದರು.
ಅವರು ಗುರುವಾರ ಸಂಜೆ ಕೊಪ್ಪಳ ನಗರದಲ್ಲಿ ಸಾರ್ವಜನಿಕರಿದ ಹವಾಲು ಸ್ವಿಕರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ರಾತ್ರಿ ಗಸ್ತು ಮರು ಆರಂಭಿಸಿ ಎಂದು ಸೂಚಿಸಿದರು.ಬೀಟ್ ವ್ಯಾಪ್ತಿಯಲ್ಲಿ ಅಕ್ರಮ ನಡೆದರೆ ಬೀಟ್ ಪೊಲೀಸರ ಮೇಲೆ ಕ್ರಮವಾಗಲಿ.ಇಲಾಖೆಯಿಂದ ಸಾರ್ವಜನಿಕರ ಕುಂದು ಕೊರತೆ ಆಲಿಕೆ ಸಭೆ ನಿರಂತರ ಐಜಿ, ಎಸ್ಪಿ, ಡಿವೈಎಸ್ಪಿ, ಪಿಎಸ್ಐ ಸೇರಿದಂತೆ ಪ್ರತಿ ಹಂತದಲ್ಲಿ ಸಭೆಗಳಾಗಲಿ ಎಂದು ಹೇಳಿದರು.
ಕಠಿಣ ಕ್ರಮ :ಯಾರಾದರು ಸಮಾಜ ವಿರೋಧಿ ಚಟುವಟಿಕೆ ಮಾಡಿದರೆ ಮಟ್ಟ ಹಾಕಿ. ಕಾರಟಗಿ, ಹುಲಿಹೈದರ್ ನಲ್ಲಿ ಪೊಲೀಸ್ ವೈಫಲ್ಯವಾಗಿದೆ ಅವರ ವಿರುದ್ಧ ಕ್ರಮ ಆಗಬೇಕು.ಕೋಮು,ಜಾತಿ ವಿಷಯ ಬೆಳೆಸುವವರನ್ನು ಜಾತಿ, ಜನಾಂಗ, ಕೋಮು ವಿಷಯದಲ್ಲಿ ಗಲಾಟೆ ಆಗಬಾರದು ಇದಕ್ಕೆಲ್ಲ ಇಲಾಖೆ ಆಸ್ಪದ ಕೊಡಬಾರದು ಅಂತಹ ಗಟನೆಗಳು ಆಗದಂತೆ ಮಟ್ಟ ಹಾಕಿ ಎಂದು ಸೂಚಿಸಿದರು.
ಎಂಎಲ್‌ಎ ಚುನಾವಣೆಯಲ್ಲಿ ಶಾಂತಿಯುತವಾಗಿ ನಡೆದಿದೆ. ಜನರು ಸಹಕರಿಸಿದ್ದಾರೆ. ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಅಭಿವೃದ್ಧಿ ವಿಷಯಗಳಲ್ಲಿ ಬೆಂಲಿಸಿ ಎಂದು ಸೂಚಿಸಿದರು.
ಬಳ್ಳಾರಿ ವಿಭಾಗದ ಐಜಿ ಲೋಕೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ಇದ್ದರು.
ಸೈಯ್ಯದ್ ನಾಸೀರ್ ಹುಸೇನಿ, ರಾಜಶೇಖರ್ ಆಡೂರು, ಕೃಷ್ಣಾರಡ್ಡಿ ಗಲಬಿ, ಸಖಿ ಒನ್ ಸ್ಟಾಪ್ ಸೆಂಟರ್ ನ ಯಮುನಾ, ಕಾಸೀಂ ಅಲಿ ಮುದ್ದಾಬಳ್ಳಿ ಸೇರಿ ಅನೇಕರು ಅಹವಾಲು ಸಲ್ಲಿಸಿದರು.