
ಕೆ ಆರ್ ಪಿ ಪಿ ರಾಜ್ಯಾಧ್ಯಕ್ಷ ಗಾಲಿ ಜನಾರ್ಧನ್ ರೆಡ್ಡಿ, ಬರ್ತಡೇ ಆಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೧- ಮಾಜಿ ಸಚಿವ, ಕಲ್ಯಾಣ ಕರ್ನಾಟಕ ಪ್ರಗತಿಪಕ್ಷದ ರಾಜ್ಯಾಧ್ಯಕ್ಷರು, ಗಂಗಾವತಿ ಶಾಸಕರು ಆಗಿರುವಾ ಗಾಲಿ ಜನಾರ್ಧನ್ ರೆಡ್ಡಿ 57ನೇ ಬರ್ತಡೇ ಯನ್ನು, ಪಕ್ಷದ ಮುಖಂಡರು, ಅಭಿಮಾನಿಗಳ ನೇತೃತ್ವದಲ್ಲಿ ಅದ್ದೂರಿಯಿಂದ ಇಂದು ಆಚರಿಸಲಾಯಿತು.
ಪಕ್ಷದ ವತಿಯಿಂದ 57 ಕೆಜಿ ಕೇಕ್ ಕತ್ತರಿಸಲಾಯಿತು.. ಈ ಸಂದರ್ಭವಾಗಿ ನಗರದಲ್ಲಿ ಪಕ್ಷದ ವತಿಯಿಂದ ಹಲವಾರು ಸಮಾಜ ಸೇವ ಕಾರ್ಯಕ್ರಮಗಳು ನಡತೆವು. ನಗರ ಆರಾಧ್ಯ ದೇವತೆ ಕನಕದುರ್ಗ ದುರ್ಗಮ್ಮಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ದ್ವಿಚಕ್ರವಾಹನ ರ್ಯಾಲಿ, ಆರೋಗ್ಯ ಪರೀಕ್ಷಾ ಶಿಬಿರ, ಕಾರ್ಯಕ್ರಮಗಳು ನಡೆದವು. ಅನಾಥಾಶ್ರಮಗಳಿಗೆ ಹೋಗಿ ಅಲ್ಲಿನ ಜನಕ್ಕೆ ಬಟ್ಟೆಗಳು, ಹಣ್ಣು ಹಂಪಲ ಹಂಚಲಾಯಿತು.
ಈ ಸಂದರ್ಭವಾಗಿ ಕಾರ್ಯಕ್ರಮಗಳಲ್ಲಿ, ಪಕ್ಷದ ಮುಖಂಡರು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಸತಿ ಮಣಿ ಗಾಲಿ ಲಕ್ಷ್ಮಿ ಅರುಣ, ಮಗಳು ಬ್ರಾಹ್ಮಣಿ, ಮಾಜಿ ಮೇಯರ್ ಗುರ್ರಂ, ವೆಂಕಟರಮಣ, ಓ.ಎಂ. ಸಿ.ಶ್ರೀನಿವಾಸ ರೆಡ್ಡಿ, ಮಾಜಿ ಕಾರ್ಪೊರೇಟರ್ ಕೆ ಎಸ್ ದಿವಾಕರ್, ಗೋನಾಳ್ ರಾಜಶೇಖರ್ ಗೌಡ, ಮುನ್ನಾಭಾಯ್, ಪಕ್ಷದ ಜಿಲ್ಲಾಧ್ಯಕ್ಷ ದಮ್ಮೂರ್ ಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಆಚಾರಿ, ಕೊಳಗಲ್ಲು ಅಂಜಿನಿ, ಉಂಡೆ ಕ ರಾಜೇಶ್ ಸೇರಿದಂತೆ ಹಲವಾರು ಹಿರಿಯ ದೂರಿಣರು ಮುಖಂಡರು ಯುವ ಕಾರ್ಯಕರ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.