WhatsApp Image 2024-06-05 at 2.13.12 PM

ಗಿಡ, ಮರಗಳು ಭೂಮಿಯ ಮೇಲೆ ಜೀವರಾಶಿಗಳಿಗೆ ಆಸರೆ

ಕರುನಾಡ ಬೆಳಗು ಸುದ್ದಿ

ಕುಕನೂರ, 5- ತಾಲೂಕಿ ಮಂಡಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಂಪೂರ ಗ್ರಾಮದ ಅಮೃತ ಸರೋವರದ ದಂಡೆಯ ಮೇಲೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಮೃತ ಸರೋವರದ ದಂಡೆಯ ಮೇಲೆ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ಮಾನ್ಯ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನ ಮಾತನಾಡಿದರು.

ಮರಗಿಡಗಳು ಪರಿಸರವನ್ನು ಸಮತೋಲನಕ್ಕೆ ಒಳಪಡಿಸುವ ಒಂದು ಭಾಗ ಒಟ್ಟು ಭೂಭಾಗದ ಕನಿಷ್ಠ 33% ಅರಣ್ಯ ಇರಬೇಕು ಆದರೆ ಇತ್ತೀಚಿನ ದಿನಗಳಲ್ಲಿ ಮರಗಿಡಗಳನ್ನು ಕಡಿದು ಪರಿಸರ ಅಸಮತೋಲನ ಮಾಡುತ್ತಿದ್ದೇವೆ, ಇದರಿಂದಾಗಿ ಅತೀಯಾದ ಬಿಸಿಲು, ಅಕಾಲಿಕ ಮಳೆ ಪರಿಸರ ನಾಶದಂತ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ, ಅದಕ್ಕಾಗಿ ಕನಿಷ್ಠ ವರ್ಷಕ್ಕೆ ಒಬ್ಬ ವ್ಯಕ್ತಿ ಲಭ್ಯವಿರುವ ಸ್ಥಳದಲ್ಲಿ7 ಗಿಡಗಳನ್ನು ನೇಡುವ ಸಂಕಲ್ಪ ಮಾಡಬೇಕು, ಅಲ್ಲದೇ ನರೇಗಾ ಯೋಜನೆಯಡಿ ಅರಣ್ಣೀಕರಣಕ್ಕೆ ಹೆಚ್ಚಿನ ಅವಕಾಶವಿದೆ ಎಲ್ಲರೂ ತಮ್ಮ ತಮ್ಮ ಜಮೀನಿನಲ್ಲಿ ಅರಣ್ಣೀಕರಣ ಕಾಮಗಾರಿ ಕೈಗೊಂಡಲ್ಲಿ ನರೇಗಾ ಸಹಾಯಧನ ಸಿಗಲಿದೆ, ಮತ್ತು ತಮ್ಮ ಹೊಲಗಳ ಸುತ್ತ ಬದು ನಿರ್ಮಾಣ ಮಾಡುವುದರಿಂದ ಸಾಕಷ್ಟು ಪ್ರಮಾಣದ ನೀರನ್ನು ಸಂರಕ್ಷಿಸಿ ಅಂತರ್ಜಲ ಹೆಚ್ಚಿಸಬಹುದು ಅದಕ್ಕಾಗಿ ಎಲ್ಲರೂ ಪರಸರ ಉಳಿವಿಗಾಗಿ ಪಣ ತೋಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ್ ಕಾವಳೆ, ನರೇಗಾ ಐ.ಇ.ಸಿ ಸಂಯೋಜಕ, ಗ್ರಾ.ಪಂ ಸಿಬ್ಬಂದಿಗಳು ಸಾರ್ವಜನಿಕರು, ನರೇಗಾ ಕೂಲಿಕಾರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!