
ಗವಿಶ್ರೀಗಳ ಪದವಿ ಗೆಳೆಯರ ರಜತ ಸಂಭ್ರಮ
ಗುರುಗಳು ಜ್ಞಾನ ದೀಪ ಹಚ್ಚಿದ ಚೇತನಗಳು – ಗವಿ ಶ್ರೀ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 24- ತಂದೆ – ತಾಯಿ . ಗುರುಗಳ ಋಣ ತಿಸಿಲು ಸಾಧ್ಯವಿಲ್ಲಾ. ಗುರುಗಳು ನಮ್ಮ ಅಂತರಂಗದಲ್ಲಿ ಜ್ಞಾನದ ಬೀಜ ಬಿತ್ತಿದ ಚೇತನಗಳು ಎಂದು ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹೇಳಿದರು.
ಅವರು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ (ಪದವಿ ಅಂತಿಮ ವರ್ಷದ) ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹಕ್ಕೆ ಈಗ 25 ವರ್ಷಗಳ ಸ್ನೇಹ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನಮ್ಮ ಜೀವನದಲ್ಲಿ ನಮ್ಮ ತಂದೆ ತಾಯಿಗಳೆ ನಮ್ಮ ಜೀವನದ ನಿಜವಾದ ಹಿರೋಗಳು. ಆದಾಯ ಗಳಿಸುವ ಬರದಲ್ಲಿ ಆರೋಗ್ಯ ಮರೆಯಬೆಡಿ, ಕೆಲಸದ ಒತ್ತಡದಲ್ಲಿ ಸಂತೋಷ ವಾಗಿರುವುದನ್ನು ಮರೆಯಬೆಡಿ ಎಂದು ಸಲಹೆ ನೀಡದ , ಗೆಳೆಯರೆಲ್ಲರು 25 ವರ್ಷಗಳ ನಂತರ ಸೇರುವುದು ಅತ್ಯಂತ ಸಂತೋಷದ ಸಮಯ. ಗುರುಗಳಿಗೆ ಒಂದನೆ ಸಲ್ಲಿಸುವುದು ನಮ್ಮ ಕರ್ತವ್ಯ .
ಸ್ನೇಹ ಸಮ್ಮೀಲನ ಹಾಗೂ ಗುರು ವಂದನೆ ಸಮಾರಂಭ ಹೃದಯ ಸ್ಪರ್ಷಿ ಸಮಾರಂಭ . ನಮ್ಮ ಅಂತರಂಗಕ್ಕೆ ವಿಧ್ಯಎಂಭ ಜೋತಿ ಹಚ್ಚಿದ ಗುರುಗಳ ಗುವಂದನೆ. ಗುರುಳು ನಮಗೆ ಅಂತರಂಗ ದೀಪ ನಮ್ಮ ಜೀವನದಲ್ಲಿ ಬೆಳಗುತ್ತದೆ. ಬಳ್ಳಿಯಲ್ಲಿ ಬೆಳೆದ ಹೊವು ದೇವನ ತಲೆ ಮೇಲೆ ಕುಡುತ್ತದೆ ಬಳ್ಳಿ ಅಲ್ಲೆ ಅಂಗಳದಲ್ಲಿ ಇರುತ್ತದೆ. ರೈತ ಬೆಳೆದ ಬೆಳೆ ಮನುಷ್ಯನ ಉತ್ತಮ ಆಹಾರ ಆಗುತ್ತದೆ.
ಜಗತ್ತು ಪರಾವಲಂಬಿಯಾಗಿದೆ. ಹಲವು ಜನರ ಋಣ ನಮ್ಮ ಮೇಲಿದೆ. ನಾವುಗಳು ನಮ್ಮನ್ನು ಭೂಮಿಗೆ ಕಳುಹಿಸಿದ ಭಗವಂತನ ಋಣ ತಿರಿಸಬೇಕು ಭಗವಂತ ನಮಗೆ ನೀಡಿದ ಕೆಲಸಗಳನ್ನು ನಾವು ನಿಷ್ಠೆಯಿಂದ ಮಾಡಬೇಕು ಎಂದು ಅಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷಕೆಯನ್ನು ಎಸ್.ಜಿ. ವಿ.ಟಿ. ಸದಸ್ಯರಾದ ವೀರೇಶ ದೇವರು ವಹಿಸವರು.ಸನ್ಮಾನ ; ಈ ಸಂದರ್ಭದಲ್ಲಿ ಗುರುಗಳಾದ ಎಂ.ಎಂ. ಇಂಡಿ, ಎಲ್.ಎಫ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಎಂ.ಎಂ. ಕಂಬಾಳಿಮಠ, ಪಾರ್ವತಿ ಪೂಜಾರ, ಜೆ.ಎಸ್. ಪಾಟೀಲ್, ಎಂ.ಎಸ್. ಪಾಟೀಲ್, ಬಿ.ಎಸ್.ಹಡಗಲಿ, ಪರೀಕ್ಷಿತರಾಜ, ಆಯ್.ಬಿ. ಅಂಗಡಿ, ಬಸವರಾಜ ಪೂಜಾರ, ವೀರೇಶ ಕಾತರಕಿ, ದಯಾನಂದ ಸಾಳುಂಕಿ, ಎಂ.ಆರ್. ಹವಳದ ಅವರು ಸೇರಿದಂತೆ ಇತರರನ್ನು ಸನ್ಮನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸೋಮರಡ್ಡಿ ಅಳವಂಡಿ ನಿರುಪಿಸಿದರು. ಪ್ರಾಸ್ತಾವಿಕ ವಾಗಿ ರಾಚಮ್ಮ ಮಾತನಾಡಿದರು.