
1995-96ನೇ ಸಾಲಿನ
ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆ ಮುಧೋಳ ವಿದ್ಯಾರ್ಥಿಗಳ
ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ
ಕರುನಾಡ ಬೆಳಗು ಸುದ್ದಿ
ಯಲಬರ್ಗಾ 27 – ಇಡೀ ದೇಶದಲ್ಲಿ ವಿದ್ಯಾರ್ಥಿಗಳನ್ನು ತಿದ್ದಿ ತಿಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಶಕ್ತಿ ಗುರುಗಳಿಗೆ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದಿನ
ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಬಹಳ ಮುಖ್ಯ ಜೀವನುದುದ್ದಕ್ಕೂ ಅಗತ್ಯ, ಅದರಲ್ಲಿ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಮೆರೆಯಲು ಅಸಾಧ್ಯ ಎಂದು ತ್ರಿಲಿಂಗೇಶ್ವರ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ ಜಲ ಸಂರಕ್ಷಣಾಧಿಕಾರಿ ಆನಂದ್ ಮಲ್ಲಿಗವಾಡ ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿ ಹೇಳಿದರು,
ತಾಲೂಕಿನ ಮುಧೋಳ ಗ್ರಾಮದಲ್ಲಿ 1995-96ನೇ ಸಾಲಿನ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಅದೇ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಯಿತು, ಕಾರ್ಯಕ್ರಮವನ್ನು ನಿವೃತ್ತ ಗುರುಗಳಿಂದ ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು,
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರು ಕಳಕಪ್ಪ ಜಿ, ತಳುವಗೇರಿ ಅವರು ಮಾತನಾಡಿ ಈ ಶಾಲೆಯಲ್ಲಿ ಕಲಿತ ಎಲ್ಲರೂ ನೀವು ಪುಣ್ಯವಂತರು ಎಂದರು.
ನಮ್ಮ ಮಕ್ಕಳು ಕೂಡಾ ಗೌರವಿಸದ ಈ ಕಾಲ ಘಟ್ಟದಲ್ಲಿ ಈ ನಮ್ಮ ಹಳೆ ವಿದ್ಯಾರ್ಥಿಗಳು ನಮ್ಮನ್ನು ನಡೆಸಿಕೊಂಡ ರೀತಿ ಅದ್ಭುತ, ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯ ಎಂದು ಭಾವುಕರಾಗಿ ಮಾತನಾಡಿದರು. ನಂತರ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರು ಚಿದಾನಂದಪ್ಪ ಕಜ್ಜಿ ಅವರು ಮಾತನಾಡಿ 28 ವರ್ಷಗಳ ಬಳಿಕ ನಿಮ್ಮನ್ನು ನೋಡಿ ತುಂಬಾ ಎಲ್ಲಿಲ್ಲದ ಸಂತಸ ತಂದಿದೆ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ನೀವು ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ನಮ್ಮಜೊತೆಗಿರುತ್ತದೆ ಎಂದರೆ ಇದೆ ಸಾಕ್ಷಿ ಎಂದರು,
ಪ್ರಾಸ್ತವಿಕವಾಗಿ ಮಾತನಾಡಿದ ಬಸವ ಜ್ಯೋತಿ ಶಾಲೆಯ ಶಿಕ್ಷಣ ಸಂಸ್ಥೆ ಶಿವಶರಣಪ್ಪ ಬಳಿಗಾರ ಅವರು ಮಾತನಾಡಿ ಇಂದಿನ ಸಮಾಜದಲ್ಲಿ ಗುರು ಶಿಷ್ಯರ ಬಾಂಧವ್ಯ. ಸಂಬಂಧ.ಉತ್ತಮ ಇದ್ದಾಗ ಮಾತ್ರ ಶಿಕ್ಷಣದಲ್ಲಿ ಕ್ರಾಂತಿಯ ಬದಲಾವಣೆ ಆಗಲು ಸಾಧ್ಯ ಮತ್ತು ಆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಕ್ಕೆ ಹೋಗಲು ಸಹಕಾರ ಆಗುವದು ಮತ್ತು ಇಲ್ಲಿ ಶಿಸ್ತು ಮತ್ತು ಸಮಯಕ್ಕೆ ಮೊದಲ ಅಧ್ಯತೆ ಆಗಿದೆ. ನೀವು ಕಲಿಕೆಯಲ್ಲಿ ಇವಗಳನ್ನು ರೂಢಿಸಿಕೊಂಡು ನಿಮ್ಮ ಜೀವನ ಉತ್ತಮ ಸ್ಥಿತಿಗೆ ಬರಲು ಕಾರಣ ಎಂದು ಹೇಳಿದರು, ನಂತರ ಮಾತನಾಡಿದ ನಿವೃತ್ತ ಶಿಕ್ಷಕರು ಎಂಜಿ ಪಲ್ಲೇದ್ ಹಾಗೂ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆ ವಿದ್ಯಾವರ್ಧಕ ಅಧ್ಯಕ್ಷರಾದ ಚಂದ್ರು ದೇಸಾಯಿ ಅವರು ಕೂಡ ಮಾತನಾಡಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರೇಶ್ ಜಿಗಳೂರ ಶ್ರೀ ತ್ರಿಲಿಂಗೇಶ್ವರ್ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಮಾತನಾಡಿದರು, ವಿಶ್ವನಾಥ್ ಅಕ್ಕಸಾಲಿಗರ್ ಹಾಗೂ ರಾಜೇಶ್ವರಿ ಮಾಡ್ಲಗೇರಿ ಅವರು ನಿರೂಪಣೆ ಮಾಡಿದರು, ನಂತರ ಗ್ರಾಮದ ಪರವಾಗಿ ಶಿಕ್ಷಕ ವೃಂದದವರಿಗೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಎಲ್ಲರೊ ಸೇರಿ ಗುರುಗಳಿಗೆ ಸನ್ಮಾನ ಮಾಡಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಚಿದಾನಂದಪ್ಪ ಕಜ್ಜಿ ನಿವೃತ್ತ ಮುಖ್ಯೋಪಾಧ್ಯಾಯರು, ಕಳಕಪ್ಪ ಜಿ, ತಳುವಗೇರಿ ನಿವೃತ್ತ ಶಿಕ್ಷಕರು, ಹನಮಂತಪ್ಪ ವಡ್ಡರ ನಿವೃತ್ತ ಶಿಕ್ಷಕರು, ಮಲ್ಲಕಾರ್ಜುನ ಜಿ. ಪಲ್ಲೇದ ನಿವೃತ್ತ ಶಿಕ್ಷಕರು, ಬಸಪ್ಪ ಹಗೇದಾಳ ನಿವೃತ್ತ ಕಛೇರಿ ಸಿಬ್ಬಂದಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಈಶಪ್ಪ ಜಿವೋಜಿ ಮತ್ತು ಶ್ರೀ ತ್ರಿಲಿಂಗೇಶ್ವರ್ ಪ್ರೌಢಶಾಲೆ ಶಿಕ್ಷಕರು ಎಲ್ಲರೂ ಇದ್ದರು, ಹಾಗೂ ವಿವಿಧ ಮನರಂಜನೆ ಕಾರ್ಯಕ್ರಮಗಳು ಅತ್ಯಾಕರ್ಷಕವಾಗಿದ್ದವು. ಮೆರವಣಿಗೆಯಲ್ಲಿ ಗುರುಗಳನ್ನು ವೇದಿಕೆಗೆ ಕರೆತಂದರು, ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹಾಗು ಗ್ರಾಮದ ಗ್ರಾಮಸ್ಥರು ಮತ್ತು ಇತರರು ಭಾಗವಹಿಸಿದ್ದರು,