
ಗುರುಸ್ಮರಣೆಯಿಂದ ತಾಪತ್ರಯ ನಿವಾರಣೆ;
ಶ್ರೀ ಚನ್ನಬಸವ ಸ್ವಾಮಿಗಳು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ— ಕಲಿಸಿದ ಹಾಗೂ ಮನೆತನದ ಗುರುಗಳ ನಾಮಸ್ಮರಣೆಯಿಂದ ಸಕಲ ಸಂಕಷ್ಟಗಳು ನಿವಾರಣೆಗೊಳ್ಳವವು ಎಂದು ನಿಡಗುಂದಿಕೊಪ್ಪದ ಚೆನ್ನಬಸವ ಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಪ್ರವಚನದ ನಾಲ್ಕನೇ ದಿನದ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ನೋಡಿದರೆ ಕರಮುಡಿ ಗ್ರಾಮದಲ್ಲಿ ಭಾವೈಕ್ತತೆ ಇದೆ ಅನಿಸುತ್ತದೆ ಜಾತಿ ಬೇಧಗಳನ್ನು ಎಣಿಸದೆ ಸಾಮರಸ್ಯದ ಬದುಕು ಸಾಗಿಸಲು ಭಾವನೆ ಹಾಗೂ ಮನಸ್ಸು ಎರಡು ಶುದ್ಧವಾಗಿರಬೇಕು ಅದು ನಿಜಕ್ಕೂ ಶಿವನಿಗೆ ಅರ್ಪಣೆ ಯಾಗುತ್ತದೆ ಅಂತಹ ಮಲ್ಲಿಗೆ ಹೂವಿನ ಮನಸ್ಸು ಗ್ರಾಮದವರದಾಗಿದೆ.
ಒಂದು ಒಳ್ಳೆಯ ಧಾರ್ಮಿಕ ಕೆಲಸ ಹೇಗಿರಬೇಕು ಎಂಬುವುದಕ್ಕೆ ಗ್ರಾಮದ ಹಿರಿಯರು ˌ ಯುವಕರು ! ಮಹಿಳೆಯರು ಮಾಡುತ್ತಿರುವ ಕೆಲಸವೇ ಸಾಕ್ಷಿಯಾಗಿದೆ ಎಂದರು. ಗಜಗಿನಹಾಳದ ವೀರೇಶ ಶಾಸ್ತ್ರಿಗಳು ವೀರಭದ್ರೇಶ್ವರ ಪುರಾಣ ಪ್ರವಚಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ ˌ ವೀರಭದ್ರಯ್ಯ ಕೆಂಬಾವಿಮಠ ರವರು ಸಂಗೀತ ಕಾರ್ಯಕ್ರಮ ನೀಡಿದರು.
ರಾಜು ಉಳ್ಳಾಗಡ್ಡಿ, ಮೈಲಾರಪ್ಪ ಪಲ್ಲೇದˌ ಮಂಜುನಾಥ ತುರಬಿನˌ ವೀರಣ್ಣ ಹೆಂಡಿಗೇರಿˌ ನಿಂಗಮ್ಮ ಗಡ್ಡದ ˌಶಂಕರಗೌಡ ಹಾದಿಮನಿˌಭೀಮಪ್ಪ ಗಾಣಗೇರ ˌ ವೀರಣ್ನ ಮಾನಶೆಟ್ಟಿ ˌಶಾರದಾ ಕುರಿ! ಸುನೀಲ್ ಪಾಟೀಲ! ಜಯದೇವನಗೌಡ ಪಾಟೀಲˌ ಅನ್ನಪೂರ್ಣ ಕೆಂಚರಡ್ಡಿˌ ಶಕುಂತಲಾ ಪಾಟೀಲ ˌಶಿವಪ್ಪ ಉಳ್ಳಾಗಡ್ದಿ ˌ ಕಳಕಪ್ಪ ರಾಟಿ! ಶರಣಗೌಡ ಪೋ.ಪಾಟೀಲ ˌ ಶ್ಯಾಮೀದ್ ಸಾಬ ಮುಲ್ಲಾ ˌಹುಚ್ಛುಸಾಬ ಬಡಿಗೇರˌ ಮಂಜುನಾಥ ಕುಕನೂರ ಚನ್ನಬಸಪ್ಪ ಗೊಂಗಡಶೆಟ್ಟಿ ! ಗೌಡಪ್ಪ ಬಲಕುಂದಿ ˌ ಉಮೇಶ ಕುಕನೂರ ˌ ಮರ್ಧಾನಸಾಬ ಮುಲ್ಲಾ ˌಗಂಗಪ್ಪ ಹವಳಿ. ವೀರೂಪಾಕ್ಜ್ಞಪ್ಪ ಉಳ್ಳಾಗಡ್ಡಿ. ಪರುಶರಾಮ ರಾಠೊಡ ˌಇನ್ನೀತರರು ಉಪಸ್ಥಿತರಿದ್ದರು. ದಾಸೋಹ ಸೇವೆಯನ್ನು ಪೋಲಿಸಪಾಟೀಲ ಹಾಗೂ ಮಾಲಿಪಾಟೀಲ ಮನೆತನದವರು ಮಾಡಿದರು .