
ಗೃಹರಕ್ಷಕದಳದ ನಡೆ ಹಂಪಿ ಸ್ವಚ್ಛತಾ ಕಡೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,12- ಗೃಹರಕ್ಷಕದಳದ ವತಿಯಿಂದ ಹಂಪೆಯಲ್ಲಿ ಹಂಪಿ ಸ್ವಚ್ಛತಾ ಅಭಿಯಾನವನ್ನು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ರಥಭೀದಿ ಹಾಗೂ ಪಾರ್ಕಿಂಗ್ ಸ್ಥಳ ಹಾಗೂ ಸರ್ಕಾರಿ ಶಾಲಾ ಆವರಣ ಕಸ ಗುಡಿಸುವುದರೊಂದಿಗೆ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹಂಪಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಶ್ರೀಮತಿ ರಜನಿ ಷಣ್ಮುಖ, ಪಿಡಿಒ ಶ್ರೀ ಗಂಗಾಧರ್ ಬರಿಕ ಹಾಗೂ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.
ಹಂಪಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮಾನ್ಯ ಜಿಲ್ಲಾ ಸಮಾಧೇಷ್ಟರಾದ ಶ್ರೀ ಬಸವರಾಜ್ ಅಗಸರರವರು ಮಾತನಾಡಿ ಹಂಪಿ ಪುಣ್ಯಕ್ಷೇತ್ರವಾಗಿದ್ದು ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿ ಸಂಗೀತ ಸಾಂಸ್ಕೃತಿ ಕದ ನೆಲೆಬೀಡು ಪ್ರಖ್ಯಾತಿ ಹೊಂದಿದ್ದು ಇದನ್ನು ಕಾಪಾಡುವುದು ಸ್ವಚ್ಛತೆಯಿಂದ ಇಡುವುದು, ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಘಟಕಾಧಿಕಾರಿಗಳಾದ ಎಸ್.ಎಂ. ಗಿರೀಶ್ ಹಾಗೂ ಪ್ಲಟೂನ್ ಕಮಾಂಡರ್ ಆದ ಎಲ್. ವಾಲ್ಯಾನಾಯ್ಕ್, ಪಿ. ಭಾಷಾ ಸಾಹೇಬ್, H. ಸಿದ್ದಪ್ಪ, ಶ್ರೀಶೈಲ ಹಲಸಂಗಿ ಮತ್ತು ಹೊಸಪೇಟೆ ಹಾಗೂ ಕಮಲಾಪುರ ಘಟಕದ ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು ಭಾಗವಹಿಸಿದ್ದರು.