WhatsApp Image 2024-02-29 at 6.16.11 PM

ಗೇದಗೇರಿ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳು ಮತ್ತು ಅದ್ದೂರಿಯಾಗಿ ಜರುಗಿದ ಮಹಾ ರಥೋತ್ಸವ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,29- ಪ್ರತಿಯೊಬ್ಬರು ಸಾಮೂಹಿಕ ಮಾಡಿಕೂಳ್ಳುವದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಸಾಮೂಹಿಕ ವಿವಾಹದಲ್ಲಿ ನೀವು ಮದುವೆಯಾಗುವದರಿಂದ ನಾಡಿನ ವಿವಿಧ ಪರಮ್ಮಪೂಜ್ಯ ರ ಆಶೀರ್ವಾದ ನಿಮ್ಮಗೆ ಸಿಗುತ್ತದೆ ಇಂದು ಮದುವೆಯಾದ ನವದಂಪತಿಗಳ ನಿಮ್ಮ ಜೀವನ ಸುಖಮಯವಾಗಿ ಸಾಗಲಿ ಮತ್ತು ನಿಮ್ಮ ಬಾಳು ಬಂಗಾರವಾಗಲಿ ಎಂದು ಶ್ರೀಮ.ನಿ.ಪ್ರ ಜಗದ್ಗುರು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ ಗೇದಗೇರಿ ವ ಕುದ್ರಿಮೋತಿ ಹೇಳಿದರು.

ತಾಲೂಕಿನ ಗೇದಗೇರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ 15ನೇ ವರ್ಷದ ಮಹಾ ರಥೋತ್ಸವ ಮತ್ತು ವೀರಶೈವ ಧಾರ್ಮಿಕ ಉಚಿತ ಸಾಮೂಹಿಕ ವಿವಾಹಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಭಯ ಶ್ರೀ ಗಳು ಪರಮ್ಮ ಪೊಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರುಮಠ ಗೇದಗೇರಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಪ್ರತಿ ವರ್ಷದಂತ ಈ ವರ್ಷವು ಸಹ ಗೇದಗೇರಿ ಗ್ರಾಮದ ಎಲ್ಲರೂ ಜಾತಿ ಬೇದ ವಿಲ್ಲದೆ ಎಲ್ಲರೂ ಮಾಡುವ ಈ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹಗಳು ಒಂದು ಹಬ್ಬವಿದಂತೆ ಎಂದರು.

ಪರಮ್ಮಪೂಜ್ಯ ಧರಮುರುಡಿ ಹಿರೇಮಠದ ಶ್ರೀ ಷ. ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೂಬ್ಬರು ಧಾನ ಮಾಡುವದರಿಂದ ಶ್ರೇಯಸು ಸಿಗುತ್ತದೆ ಗೇದಗೇರಿ ಗ್ರಾಮದ ಸದ್ಬಕ್ತರು ಎಲ್ಲಾ ಧಮ೯ದವರು ಒಟ್ಟಾಗಿ ಸೇರಿ ಭಾವ ಐಕತೆಯಿಂದ ಅವರ ಪ್ರಮಾಣಿಕತೆ ಪರಿಶ್ರಮದಿಂದ ಇಂತಹ ಸಾಮಾಜಿಕ. ಧಾರ್ಮಿಕ ಜಾತ್ರಾ ಮಹೋತ್ಸವ ಸಾಮೂಹಿಕ ಮಾಡುವದಕ್ಕೆ ಆಗುತ್ತದೆ ಅವರ ಪರಿಶ್ರಮ ಅಜರಾಮರವಾಗಿ ಉಳಿಯುತ್ತದೆ ಇಂದು ಮದುವೆ ಯಾದ ನವ ದಂಪತಿಗಳು ಪರಸ್ಪರ ಪ್ರೀತಿ ಪ್ರೇಮದಿಂದ ಅಧ೯ಮಾಡಿಕೂಂಡು ಬಾಳಬೇಕು ಗುರು-.ಹಿರಿಯರನ್ನು ಗೌರವಿಸಬೇಕು ಸತಿ. ಪತಿ ಒಂದು ಬಂಡಿಯ ಎರಡು ಚಕ್ರಗಳು ಇದ್ದಹಾಗೆ ನಿಮ್ಮ ಜೀವನ ಸುಖಮಯವಾಗಲಿ. ಮಾನವ ರಾಗಿ ಹುಟ್ಟಿದ ಮೇಲೆ ಧಾನ. ಧಮ೯ ಪರೋಪಕಾರ. ಒಳ್ಳೆಯ ಕೆಲಸ ಮಾಡುವ ಮೂಲಕ ನಿಮ್ಮ ಜೀವನ ಪಾವನ ಮಾಡಿಕೂಳ್ಳಿ ಎಂದು ಹೇಳಿದರು.

ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಸಂಜೆ ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ನಂತರ ಶ್ರೀ ಶರಣ ಬಸವೇಶ್ವರ ದೇವರ ದಶ೯ನ ಪಡದುಕೂಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಎಂ ಕೂಪ್ಪದ, ಉಪಾಧ್ಯಕ್ಷ ಶಶಿಕಲಾ ಭೀಮಣ್ಣ ಮುರುಡಿ, ಸದಸ್ಯರಾದ ಶೇಖವ್ವ ತಿರುಪತಿ ಬಸರಗಿಡ, ನಾಗರಾಜ ನಾಯಕ, ಶರಣಪ್ಪ ನಾಗೂರು, ನೀಲವ್ವ ಹನಮಗೌಡ ಕೋಳಿಹಾಳ, ಫಕೀರವ್ವ ರುದ್ರಪ್ಪ ನಡುಲಮನಿ, ಅಕ್ಕಮಹಾದೇವಿ ಶರಣಪ್ಪ ಹಾಳಕೇರಿ, ಗ್ರಾಮ ಪಂಚಾಯಿತಿ ಪಿ. ಡಿ. ಓ ನಂಹಾತೇಶ ಬಾಳೆಕಾಯಿ, ಶಿವಶಂಕರರಾವ ದೇಸಾಯಿ, ಮಹೇಶ ಭೋತೆ, ಆನಂದ ಉಳ್ಳಾಗಡ್ಡಿ, ದೇವಸ್ಥಾನ ಟ್ರಸ್ಟ್ ಕಮೀಟಿಯ ಅಧ್ಯಕ್ಷ ಬಸಪ್ಪ ಎಚ್ ಬೆದವಟಿ, ದೂಡ್ಡನಗೌಡ ಬಿ. ಗೌಡ್ರ, ರುದ್ರಪ್ಪ ಎಂ. ಕೂಪ್ಪದ, ಲಿಂಗರಾಜ ಪಾಟೀಲ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!