
ಗೊರಲೂಟಿ ಕಣ್ವಮಠದ ಶ್ರೀಗಳ ಪುರಪ್ರವೇಶ
ಕರುನಾಡ ಬೆಳಗು ಸುದ್ದಿ
ತಾವರಗೇರಾ 21-ವೈಕುಂಠ ಏಕಾದಸಿ ಪ್ರಯುಕ್ತ ಶ್ರೀಮನ್ ಮಾಧವತಿರ್ಥ ಮೂಲಮಹಾ ಸಂಸ್ಥಾನ ಶ್ರೀಮತ್ ಕಣ್ವಮಠ (ವೇರಘಟ್ಟ) ಮಹಾ ಸಂಸ್ಥಾನ ಹುಣಸಿಹೊಳೆ ಇವರ ಪರಂಪರೆಯ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಶ್ರೀ 1008 ವಿಧ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಗೊರಲೂಟಿಯಲ್ಲಿ.ಕಣ್ವಮಠದ 5ನೇ ಪೀಠಸ್ಥರಾದ ಶ್ರೀವಿದ್ಯಾಸಂಪೂರ್ಣ ತೀಥರ ವೃಂದಾವನ ಗೊರಲೂಟಿಯಲ್ಲಿ 23ಡಿ. ಶನಿವಾರ ಸಂಜೆ 06-00 ಗಂಟೆಗೆ ವೇದಘೋಷ ಹಾಗು ವಿವಿಧ ಭಜನಾ ಮಂಡಳಿಗಳಿಂದ ಭಜನೆಯೋಂದಿಗೆ ಪುರ ಪ್ರವೇಶ ಕಾರ್ಯಕ್ರಮ ಜರುಗಲಿದೆ.
ನಂತರ ಆಗಮಿಸಿದ ಭಕ್ತರಿಗೆ ಉಪಹಾರ, ನಂತರ ಶ್ರೀಪಾದಂಗಳವರಿAದ ತೊಟ್ಟಿಲು ಸೇವೆ, ಹರಿವಾಣ ಸೇವೆ ಕಾರ್ಯಕ್ರಮಗಳು ನಡೆಯುತ್ತವೆ. ದಿ.24-12-2023 ರವಿವಾರ ಬೆಳಿಗ್ಗೆ 6-00 ಗಂಟೆಗೆ ಸುರ್ಪಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾವೃತ ಅಭೀಷೇಕ, ನಂತರ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ.ನಂತರ ರಥೋತ್ಸವ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯುತ್ತದೆ ಎಂದು ಶ್ರೀವಿದ್ಯಾಸಂಪೂರ್ಣತೀರ್ಥರ ಸೇವಾ ವಿಶ್ವಸ್ಥ ಸಮೀತಿ ಶ್ರೀ ಕ್ಷೇತ್ರ ಗೊರಲೂಟಿ ಟ್ರಸ್ಟಿನ ಅಧ್ಯಕ್ಷರು ಹಾಗು ಸರ್ವ ಸದಸ್ಯರು ಈಕಾರ್ಯಕ್ರಮದಲ್ಲಿ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನದಿಂದ ಸೇವೆಗೈದು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿ ಕೊಂಡಿದ್ದಾರೆ.
ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ವಿದ್ಯಾಕಣ್ವವಿರಾಜ ತಿರ್ಥರು.