
ಗ್ಯಾರಂಟಿಯೋಜನೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಶ್ರೀರಕ್ಷೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ 30- ರಾಜ್ಯ ಸರಕಾರ ತಂದ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರಿಗೆ ವರದಾನವಾಗಿವೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನ ಪಡೆಯುವುದು ಖಚಿತ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಪ್ಪಳ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.
ಅವರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನದ್ದೇಶಿಸಿ ಮಾತನಾಡಿ, ಸ್ತ್ರೀ ಶಕ್ತಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 2 ಕೋಟಿ 83 ಲಕ್ಷ 56 ಸಾವಿರ 422 ಜನ ಮಾರ್ಚ್ ತಿಂಗಳ ವರೆಗೆ ಪ್ರಯಾಣಿಸಿದ್ದು, ಇದಕ್ಕಾಗಿ ಸರಾಕಾರ ಸಾರಿಗೆ ಇಲಾಖೆಗೆ 91 ಕೋಟಿ 35 ಲಕ್ಷ 40 ಸಾವಿರದ 390 ರೂ ಭರಿಸಿದೆ, ಗೃಹ ಜ್ಯೋತಿ ಜಿಲ್ಲೆಯ 2 ಲಕ್ಷ 70 ಸಾವಿರ 67 ಜನ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.
ಅನ್ನ ಭಾಗ್ಯ ಯೋಜನೆಯಡಿ ಮಾರ್ಚ್ ವರೆಗೆ2 ಲಕ್ಷ 10 ಸಾವಿರ ೨೮೪ ಜನರು ಪ್ರಯೋಜನ ಪಡೆಯುತ್ತಿದ್ದು, ಇದಕ್ಕಾಗಿ 114 ಕೋಟಿ 75 ಲಕ್ಷ ೫೫ ಸಾವಿರ 590 ರು ಭರಿಸಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 796 ಜನರು ಯುವನಿಧಿ ಪ್ರಯೋಜನ ಪಡೆದಿದ್ದು ಅರ್ಜಿಗಳು ಬರುತ್ತಿವೆ ಹಂತಹಂತವಾಗಿ ಎಲ್ಲರಿಗು ಯೋಜನೆ ತಲುಪಿಸಲು ಯತ್ನಿಸಲಾಗುವುದು.
ಗ್ಯಾರಂಟಿ ಅನುಷ್ಠಾನಕ್ಕಾಗಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಗು ತಾಲೂಕಾ ಪಂಚಾಯಿತಿಗಳಲ್ಲಿ ಕಚೇರಿಗಳು ತೆರೆಯಲಾಗುತ್ತಿದ್ದು, ಅಧ್ಯಕ್ಷ ಉಪಾಧ್ಯಕ್ಷರು, ತಾಲೂಕಾ ಅಧ್ಯಕ್ಷರು ಸದಸ್ಯರ ನೇಮಕ ಮಾಡಲಾಗಿದ್ದು, ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ.
ತಾಪಂ ಕಾರ್ಯನಿರ್ವಾಹಕಧಿಕಾರಿ ಅನುಷ್ಠಾನ ಸಮಿತಿ ಕಾರ್ಯದರ್ಶಿಗಳಾಗಿದ್ದು ಎಲ್ಲರಿಗೂ ಯೋಜನೆಗಳ ತಲುಪಿಸಲಾಗುತ್ತದೆ. ದಾಖಲಾತಿಗಳು ಸರಿ ಇಲ್ಲದ ಪಕ್ಷದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ.
ಬಿಜೆಪಿಗರು ಬಡವರ ಪರ ಕೆಲಸ ಮಾಡದೆ ಸುಮ್ಮನೆ ಟಿಕಿಸುತ್ತಿದ್ದಾರೆ. ಬಿಜೆಪಿ ಯವರ ಬಗ್ಗೆ ಜನರಿಗೆ ಗೋತ್ತಿದೆ.ಅವರೇ ತಕ್ಕ ಉತ್ತರ ನೀಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಬಿ.ಖಾದ್ರಿ, ಪದಾಧಿಕಾರಿಗಳಾದ ಕೆ.ವಿ.ಬಾಬು, ಆನಂದ್ ಅಸೋಲ್ಕರ್, ಮುಕ್ತಿಯಾರ್ ಉಪಸ್ಥೀತರಿದ್ದರು..