
ಗ್ಯಾರಂಟಿ ಐತಿಹಾಸಿಕ ಯೋಜನೆಗಳು : ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 7 – ರಾಜ್ಯದ ಮತದಾರರ ಆಶೀರ್ವಾದದಿಂದ ನಮ್ಮ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರ ವಹಿಸಿಕೊಂಡ ನಾವು ಈ ಹಿಂದೆ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಗೊಳಿಸುವ ಮೂಲಕ ಇಡೀ ದೇಶದಲ್ಲಿಯ ಐತಿಹಾಸಿಕ ಯೋಜನೆಗಳಾಗಿವೆ ಎಂದು ಸಿ. ಎಂ.ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಕೃಷ್ಣ ಭಾಗ್ಯ ಜಲ ನಿಗಮದಿಂದ ಹಮ್ಮಿಕೊಂಡಿದ್ದ ಚಿಕ್ಕವಂಕಲಕುಂಟಾ ಮತ್ತು ಕಲ್ಲಭಾವಿ ಕೆರೆಗಳಿಗೆ ಗಂಗಾಪೂಜೆ ಮತ್ತು ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸಂಪುಟ ದರ್ಜೆಯಲ್ಲಿ ನನ್ನಗೆ ಸ್ಥಾನಮಾನ ನೀಡಿ ಸಿ. ಎಂ. ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಗೊಂಡಿದ್ದಾರೆ ಇದರಿಂದ ರಾಜ್ಯದ ಜನರ ಇನ್ನೂ ಹೆಚ್ಚು ಕೆಲಸಮಾಡಲು ತುಂಬಾ ಅನುಕೂಲವಾಗುತ್ತದೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ 14 ಬಜೆಟ್ ಗಳನ್ನು ಮಂಡಿಸಿದ್ದಾರೆ .
ಇದೇ ಪ್ರಭುವರಿ ತಿಂಗಳಲ್ಲಿ 15 ನೇ ಬಜೆಟ್ ಮಂಡಸುವ ಮೂಲಕ ಅನುಭವಿ ಮತ್ತು ಉತ್ತಮ ಮುಖ್ಯಮಂತ್ರಿಯಾಗಿದ್ದಾರೆ ಸಿದ್ದರಾಮಯ್ಯ ಅವರ ಸಚಿವ ಸಂಪುಟ ದರ್ಜೆಯಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿದಾಗ ನನ್ನಗಿಂತ ಹೆಚ್ಚು ನೋವು ಪಟ್ಟವರು ಸಿದ್ದರಾಮಯ್ಯ ಅವರು.ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ನನ್ನಗೆ ಜವಾಬ್ದಾರಿ ನೀಡಿದಕ್ಕೆ ನನ್ನಗೆ ಸಂತಸ ತಂದಿದೆ ಎಂದರು.ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸ ಪ್ರೀತಿ ನಂಬಿಕೆ ಇಟ್ಟು ಇಷ್ಟು ವರ್ಷಗಳ ಕಾಲ ನನ್ನಗೆ ಮತ ಹಾಕಿ ಬಹು ಮತದಿಂದ ಗೆಲಸಿದಿದ್ದಾರೆ ಇದಕ್ಕೆ ಕ್ಷೇತ್ರದ ಜನತೆಗೆ ಬೆಲೆ ಕಟ್ಟುವದಕ್ಕೆ ಸಾಧ್ಯವಿಲ್ಲ ಅವರಿಗೆ ಸದಾ ಚಿರಋುಣಿಯಾಗಿದ್ದಾನೆ ನಿಮ್ಮ ಆಶೀರ್ವಾದದಿಂದ. ಶಾಸಕ. ಸಚಿವ ಸಂಸದರಾಗಿ ನಾನು ಸೇವೆ ಮಾಡಿದ್ದೇನೆ. ಸಿ.ಎಂ. ಸಿದ್ದರಾಮಯ್ಯ ನವರುಜುಲೈ ತಿಂಗಳಿನಲ್ಲಿ ನಿನ್ನನ್ನು ಮಂತ್ರಿಯಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ 7 ತಿಂಗಳಿನಲ್ಲಿ ನಾಲ್ಕು ಗ್ಯಾರೆಂಟಿಗಳನ್ನು ಜಾರಿಗೊಳಿಸಿದ್ದೇವೆ ಇನ್ನೂ ಒಂದು ಗ್ಯಾರಂಟಿ ಬಾಕಿ ಉಳಿದಿರುವುದು ನೀರಾವರಿ ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಈ ಹಿಂದೆ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಡಿದ್ದು ನಾನು ಶಾಸಕನಾದ ಸಂದರ್ಭದಲ್ಲಿ ಯಾವ ಗ್ರಾಮದಲ್ಲಿ ಅಭಿವೃದ್ಧಿ ಆಗಿರಲಿಲ್ಲಆಗಿರಲಿಲ್ಲ ಶಾಲೆ ಕಾಲೇಜು ರಸ್ತೆ ಚರಂಡಿ ವಸತಿ ಶಾಲೆಗಳನ್ನು ಮಾಡಿದ್ದೇನೆ ಕೃಷ್ಣಾ ನದಿಯಿಂದ ನಮ್ಮ ಭಾಗಕ್ಕೆ ಬರುವದು ಕೇವಲ 2 ವರಿ ಟಿಎಂಸಿ ನೀರು. ಇದನ್ನು ಬಿಜೆಪಿವರು ದೊಡ್ಡ ಪ್ರಮಾಣದಲ್ಲಿ ಬಿಂಬಿಸಲು ಹೊರಟಿದ್ದಾರೆ .
ಜನಪ್ರತಿನಿಧಿಗಳಾದವರು ಜನತೆಗೆ ನೀರಾವರಿ ವಿಚಾರದಲ್ಲಿ ಸುಳ್ಳು ಹೇಳಬಾರದು ಇನ್ನೂ ಕ್ಷೇತ್ರದಲ್ಲಿ 38 ಕೆರೆಗಳಿಗೆ ನೀರು ತುಂಬಿಸುವ ಕಾಯ೯ ಶೀಘ್ರವಾಗಿ ಮಾಡುತ್ತೇನೆ ಈಗಾಗಲೇ ಮುಖ್ಯ ಮಂತ್ರಿಗಳು ಡಿಪಿಆರ್ ತಯಾರಿಸಲು ಸೂಚಿಸಿದ್ದಾರೆ 800 ಕೋಟಿ ಬೇಕಾಗುತ್ತದೆ ಇನ್ನೂ 14 ಹೂಸ ಕೆರಗಳ ನಿರ್ಮಾಣವಾಗಬೇಕಿದೆ ಈ ಯೋಜನೆ ಮುಗಿಯಲು ಮೂರರಿಂದ ನಾಲ್ಕು ವರ್ಷಗಳಾಗಬಹುದು ಮತ್ತು ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಮಹಾದ್ವಾರ ನಿರ್ಮಾಣ. ಹಾಗೂ ದೂಡ್ಡ ಕಲ್ಯಾಣಮಠ ನಿರ್ಮಾಣ ಮಾಡಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಂಗಳೂರು ಗ್ರಾಮದಲ್ಲಿ ಬುದ್ಧ ಬಸವ ಅಂಬೇಡ್ಕರ್ ಕಲ್ಯಾಣ ಮಂಟಪಕ್ಕೆ 4 ಕೋಟಿ ಹಣ ಕೊಟ್ಟಿದ್ದೇನೆ ಮತ್ತು 200 ವಿದ್ಯಾರ್ಥಿಗಳ ಹಾಸ್ಟೆಲ್ ಮಾಡುತ್ತೇನೆ ಮತ್ತು ರೈತರ ವಿಶ್ವಾಸದಿಂದ ರೈತರು ಹೊಲಕ್ಕೆ ಹೋಗಲು ರಸ್ತೆ ಮಾಡಿಕೊಡುತ್ತೇನೆ ನೀರಾವರಿ ಮತ್ತು ಕೆರ ತುಂಬಿಸುವ ಯೋಜನೆ ವಿಚಾರದಲ್ಲಿ ಬಿಜೆಪಿಯವರು ಕ್ಷೇತ್ರದ ಜನರ ದಾರಿ ತಪಿಸುವಂತ ಕೆಲಸಮಾಡುತ್ತಿದ್ದಾರೆ ನೀರಾವರಿ ಎಂದರೇನು ಗೊತ್ತಿಲ ದವರು ಸುಮ್ಮನೆ ನೀರಾವರಿ ಬಗ್ಗೆ ಮಾತನಾಡುತ್ತಾರೆ
ಮುಂದಿನ ವರ್ಷ 6 ಹೈ ಸ್ಕೂಲ್ ಕೊಡುತ್ತೇನೆ. ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗು ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ತಾ. ಪಂ. ಇ. ಓ.ಸಂತೋಷ ಪಾಟೀಲ ಬಿರಾದಾರ ಜೆ ಮಂಜುನಾಥ , ಸಿಪಿಐ ಮೌನೇಶ್ ಪಾಟೀಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ. ಹನುಮಂತಗೌಡ ಪಾಟೀಲ.ರಾಘವೇಂದ್ರ ಜೋಶಿ, ವೀರನಗೌಡ ಪೋಲಿಸ್ ಪಾಟೀಲ ಮಹೇಶ ಹಳ್ಳಿ ಎ.ಜಿ.ಭಾವಿಮನಿ. ಯಂಕಣ್ಣ ಯರಾಶಿ, ಸಾವಿತ್ರಿ ಗೂಲ್ಲರ.ಕೆಪಿಸಿಸಿ ಸದಸ್ಯ ಗಿರೀಜಾ ಸಂಗಟಿ ಫರೀದಾಬೇಗಂ ಮಲಮ್ಮ ಗೂಂದಿ ಡಾಕ್ಟರ್ ಶಿವನಗೌಡ ದಾನರಡ್ಡಿ ಶರಣಪ್ಪ ಗಾಂಜಿ ಸುಧೀರ್ ಕೂಲ೯ಳ್ಳಿ ಮಲ್ಲು ಜಕ್ಕಲಿ ರಹಿಮಾನಸಾಬ ನಾಯಕ. ಬಸವರಾಜ ಈಳಗೇರ ರಾಜು ಎಚ್ ಇತರರು ಭಾಗವಹಿಸಿದ್ದರು