
ಕರ್ನಾಟಕ ರಾಜಕೀಯ ಅಕಾಡೆಮಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಪುನಶ್ಚೇತನ ಶಿಬಿರ ಹಳ್ಳಿ ಚಿತ್ರಾನ್ನ ಬದಲಾವಣೆಗೆ ಗ್ರಾಮ ಪಂಚಾಯತ್ ಮುಖ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ಒಂದು ಗ್ರಾಮಕ್ಕೆ ವಿದ್ಯುತ್ ರಸ್ತೆ ನೀರು ಶೌಚಾಲಯ ಗೃಹ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಒಬ್ಬ ಪ್ರಾಮಾಣಿಕ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರಿಂದ ಸಾಧ್ಯ ಗ್ರಾಮ ಪಂಚಾಯತ್ ಸ್ಥಳೀಯ ಸರ್ಕಾರವಿದ್ದಂತೆ ಎಂದು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕರ್ನಾಟಕ ರಾಜಕೀಯ ಅಕಾಡೆಮಿಯು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಆಯೋಜಿಸಿದ ಪುನಸ್ಚೇತನ ಶಿಬಿರ ಉದ್ಘಾಟನೆ ದೊಂದಿಗೆ ಅವರು ಮಾತ ನಾಡುತ್ತಾ ಡಾ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಅವಕಾಶ ಸಮ ಪ್ರಮಾಣದಲ್ಲಿ ಹಂಚಿಯಾಗ ಬೇಕು ಇಲ್ಲಿ ಮತದಾರರೇ ಶ್ರೇಷ್ಠ ಗ್ರಾಮ ಬದಲಾವಣೆಗೆ ಗ್ರಾಮ ಪಂಚಾಯತ್ ಮುಖ್ಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿಧವಾ ವೇತನ ವಿವಾಹ ನೋಂದಣಿ ಸೇರಿದಂತೆ ಮುಂತಾದ ಸೌಕರ್ಯಗಳು ಗ್ರಾಮ ಪಂಚಾಯತ್ ನಲ್ಲೇ ದೊರೆಯುವಂತೆ ವ್ಯವಸ್ಥೆ ಮಾಡಲು ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾ ಖರ್ಗೆಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರು ಮಾತನಾಡಿದರು ಮಹಾ ರುದ್ರಗೌಡ ನಾಗರಾಜ್ ಗೌಡ ಆಯೋಜಿತ ಸಿರಿಗೇರಿ ಎರ್ರೀ ಸ್ವಾಮಿ ಗ್ರಾಮ ಪಂಚಾಯತ್ ಸದಸ್ಯರ ಜಿಲ್ಲಾಧ್ಯಕ್ಷರು ದೇವಸ್ಥಾನದ ಧರ್ಮದರ್ಶಿಗಳು ಇದ್ದರು.