WhatsApp Image 2023-10-23 at 7.41.12 PM

ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಅಭಿವೃದ್ಧಿಗೆ ಶಾಸಕರಿಗೆ ಮನವಿ ಸಲ್ಲಿಕೆ

ಯಲಬುರ್ಗಾ 23 ತಾಲೂಕಿನ ಮುಧೋಳ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪನವರಿಗೆ ಮತ್ತು ಸಂಸದರು. ಶಾಸಕರು. ಮಾಜಿ ಉನ್ನತ ಶಿಕ್ಷಣ. ಸಚಿವರಾದ. ಬಸವರಾಜ ರಾಯರೆಡ್ಡಿ ಅವರಿಗೆ ಗೌರವಿಸಿ ಸನ್ಮಾನ ಮಾಡಲಾಯಿತ್ತು ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಓದಗಿಸಲು. ಹಾಗು. ಮಂಜೂರು ಮಾಡುವ ಬಗ್ಗೆ. ಮನವಿಯನ್ನು ಸಲ್ಲಿಸಿದರು,
ಗ್ರಾಮದ ಪರವಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಮುಧೋಳ ಗ್ರಾಮವು ಯಲಬುರ್ಗಾ ತಾಲೂಕಿನಲ್ಲಿ ಒಂದು ಪ್ರಮುಖ ಹಾಗೂ ಐತಿಹಾಸಿಕ ಸ್ಥಳ ಮತ್ತು ಗ್ರೇಡ್ -1 ಗ್ರಾಮ ಪಂಚಾಯತಿಯಾಗಿದೆ. ಗ್ರಾಮ ಪಂಚಾಯತಿಯು ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಕೊಂಡು ಬರುತ್ತಿದೆ. ಈ ದಿಶೆಯಲ್ಲಿ ನಮ್ಮ ಗ್ರಾಮ ಪಂಚಾಯತಿಗೆ ಇನ್ನೂ ಅನೇಕ ಅನೇಕ ಕೆಲಸಗಳನ್ನು ಕೈಗೊಳ್ಳವುದು ಬಾಕಿಯಲ್ಲಿರುತ್ತವೆ. ಹೀಗಾಗಿ ಆ ಎಲ್ಲಾ ಅಗತ್ಯ ಅಭಿವೃದ್ಧಿ ಕೆಲಸ, ಕಾರ್ಯಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ ದಯಾಳುಗಳು ತಾವು ಗೌರವಪೂರ್ವಕವಾಗಿ ಮಂಜೂರಾತಿಗಾಗಿ. ಮನವಿ. ಸಲ್ಲಿಸಲಾಗಿದೆ. ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಜೂರಿ ಮಾಡಬೇಕಾಗಿರುವ ಅಗತ್ಯ ಕಾಮಗಾರಿಗಳು.. ವಿವರ ತಾಲೂಕಿನ ಮುಧೋಳ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ ವೃತ್ತದವರೆಗೆ ಗ್ರಾಮದಲ್ಲಿ ಈಗಿರುವ ಮತ್ತು ಒಡೆದುಹೋದ ಒಳ (ಸಿಸಿ) ರಸ್ತೆ ಮೇಲೆ ಉತ್ತಮಗುಣಮಟ್ಟದ ಡಾಂಬರೀಕರಣ ಗೊಳಿಸುವುದು.
ಯಲಬುರ್ಗಾತಾಲೂಕಿನ ಮುಧೋಳ ಗ್ರಾಮ ಪಂಚಾಯತಿಯ ಆಡಳಿತವು ಒಂದೇ ಸೂರಿನಲ್ಲಿ ಬರುವಂತೆ ಹೊಸದಾಗಿ “ಗ್ರಾಮಸೌಧ” ಕಟ್ಟಡವನ್ನು ಮಂಜೂರು ಮಾಡುವುದು. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರು ಮಾಡುವುದು.
ಗ್ರಾಮದ ಕಜ್ಜಿಯವರ ಮತ್ತು ಜಿವೋಜಿಯವರ ಬಡಾವಣೆಗೆ ಹೊಸದಾಗಿ ವಿದ್ಯುತ್‌ ಸಂಪರ್ಕಕಲ್ಪಿಸುವುದು. ಈ ಮುಧೋಳ ಗ್ರಾಮಕ್ಕೆ ಪ್ರತಿನಿತ್ಯ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಹೆಚ್ಚಿನ ಸಾರಿಗೆ ವ್ಯವಸ್ಥೆ ಕಲ್ಪಿಸುವುದು.
ಗ್ರಾಮಕ್ಕೆ ಹೊಸದಾಗಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವುದು.
ಗ್ರಾಮಕ್ಕೆ ವಿಸ್ತಾರವಾದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಮಂಜೂರು ಮಾಡುವುದು.
ಗ್ರಾಮದ ರೈತರ ಜಮೀನುಗಳ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು.
ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಬಳೂಟಗಿ, ಹಳೆಯ ಯಲಬುರ್ಗಾ ಮತ್ತು ಗಜೇಂದ್ರಗಡ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು.
ಗ್ರಾಮದ ಒಳ ಮುಖ್ಯರಸ್ತೆ ಮತ್ತು ಚರಂಡಿಗಳನ್ನು ಅಭಿವೃದ್ಧಿಪಡಿಸುವುದು. ಗ್ರಾಮದ ಅಂಚೆ ಕಛೇರಿ ಪಕ್ಕದಲ್ಲಿರುವ ಚರಂಡಿಯನ್ನು ವಿಸ್ತರಿಸಿ ಸಿಡಿ ನಿರ್ಮಾಣ ಮಾಡುವುದು. ಮೇಲ್ಕಂಡ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಮುಧೋಳ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಸಮಸ್ತ ನಾಗರಿಕರು, ಗುರುಹಿರಿಯರು ಹಾಗೂ ಗ್ರಾಮ ಪಂಚಾಯತಿ ಆಡಳಿತ ವರ್ಗ, ಸಿಬ್ಬಂದಿ ವರ್ಗದವರು ತಮ್ಮಲ್ಲಿ ವಿನಂತಿಸಿ ಕೊಂಡರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಮುಧೋಳ ಗ್ರಾಮದ ಸಮಸ್ತ ಗುರು ಹಿರಿಯರು ತಮಗೆ ಹೃತ್ತೂರ್ವಕ ಅಭಿನಂದಿಸಿ ಗೌರವಿಸಿದರು,

Leave a Reply

Your email address will not be published. Required fields are marked *

error: Content is protected !!