
ಚಾಲಕರು ಸುರಕ್ಷಿತ ಯಿಂದ ಚಾಲನೆ ಮಾಡಿ ಜೀವ ರಕ್ಷಣೆ ಮಾಡಿಕೂಳ್ಳಬೇಕು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 31- ಪ್ರತಿಯೊಬ್ಬರು ವಾಹನಗಳ ಚಾಲನೆ ಮಾಡುವಾಗ ಸಮಚಿತ್ತದಿಂದ ವಾಹನಗಳ ಚಾಲನೆ ಮಾಡಿ ಸುರಕ್ಷಿತಯಿಂದ ವಾಹನಗಳ ಚಾಲನೆ ಮಾಡಿ ಜೀವ ರಕ್ಷಣೆ ಮಾಡಿಕೂಳ್ಳಬೇಕು ಎಂದು ಪಿಎಸ್ಐ ವಿಜಯ ಪ್ರತಾಪ್ ಅವರು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ರಸ್ತೆ ಸುರಕ್ಷಿತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲಾ ವಾಹನಗಳ ಚಾಲಕರು ರಸ್ತೆ ನಿಯಮಾವಳಿ ಯನ್ನು ಪಾಲಿಸಿ ಚಾಲಕರನ್ನು ನಂಬಿ ಸಾಕಷ್ಟು ಪ್ಯಾಸೆಂಜರ್ ನಿಮ್ಮ ವಾಹನಗಳಲ್ಲಿ ಹತ್ತಿರುತ್ತಾರೆ ಚಾಲಕರು ಸಮಚಿತ್ತದಿಂದ ವಾಹನ ಚಾಲನೆ ಮಾಡುವದರಿಂದ ಎಲ್ಲರೂ ಸುರಕ್ಷಿತವಾಗಿರಬಹುದು. ಅತಿ ಅವಸರ ಅಪಘಾತಕ್ಕೆ ಕಾರಣ ಹೀಗಾಗಿ ನಿಧಾನವಾಗಿ ವಾಹನಗಳ ಚಾಲನೆ ಮಾಡಿ ಜೀವಗಳ ರಕ್ಷಣೆ ಮಾಡಿ ಎಂದು ಆಟೋ ಚಾಲಕರಿಗೆ, ಟಂ ಟಂ ಚಾಲಕರಿಗೆ, ಟಾಟಾ ಎಸಿ ಮತ್ತು ಪ್ಯಾಸೆಂಜರ್ ಚಲಾಯಿಸುವ ಎಲ್ಲಾ ವಾಹನ ಚಾಲಕರಿಗೆ ಪೊಲೀಸ್ ಠಾಣಾ ಆವರಣದಲ್ಲಿ ಬರಮಾಡಿಕೊಂಡು, ರಸ್ತೆ ಸುರಕ್ಷತಾ ಸಪ್ತಾಹ” ಕುರಿತು ಪಿಎಸ್ಐ ರವರು ಸಭೆಯಲ್ಲಿ ರಸ್ತೆ ಸುರಕ್ಷತಾ ಕುರಿತು 9 ರಸ್ತೆಯ ನಿಯಮಾವಳಿಗಳನ್ನು ಹಾಗೂ ಅನುಸರಿಸಬೇಕಾದ ಎಲ್ಲಾ ನಿಯಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದ್ದರು.
ಈ ಸಂದರ್ಭದಲ್ಲಿ ಎಲ್ಲಾ ವಾಹನಗಳ ಚಾಲಕರು. ಮಾಲಕರು. ಮತ್ತು ಠಾಣೆಯ ಎಎಸ್ಐಗಳು.ಪೋಲೀಸ್ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದರು.