
ಚುನಾವಣಾ ವೀಕ್ಷಕರ ಆಗಮನ : ಸಾರ್ವಜನಿಕರ ಭೇಟಿಗೆ ಅವಕಾಶ
ಕರುನಾಡ ಬೆಳಗು ಸುದ್ದಿ
ವಿಜಯನಗರ, 20- ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು ಮತ್ತು ಚುನಾವಣಾ ವೆಚ್ಚದ ವೀಕ್ಷಕರು ಆಗಮಿಸಿದ್ದು ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ (ಐಎಎಸ್) ಅವರನ್ನು (ಮೊ.9141086849) ಬಳ್ಳಾರಿ ನಗರದಲ್ಲಿರುವ ನೂತನ ಜಿಲ್ಲಾಡಳಿತ ಭವನದ ಕಚೇರಿಯ ಪಕ್ಕದ ಸರ್ಕಾರಿ ಅತಿಥಿ ಗೃಹ ಮಂದಿರದ ಕೆಳ ಮಹಡಿಯ ಕೊಠಡಿ ಸಂಖ್ಯೆ 02 ರಲ್ಲಿ ಮಧ್ಯಾಹ್ನ 03 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು. ಅದೇ ರೀತಿ ಪೊಲೀಸ್ ವೀಕ್ಷಕರಾದ ಧರ್ಮೇಂದ್ರ ಸಿಂಗ್ ಭದೌರಿಯಾ (ಐಪಿಎಸ್) ಅವರನ್ನು (ಮೊ.9141086850) ಬಳ್ಳಾರಿ ನಗರದ ಪಾರ್ವತಿನಗರದ ಪೊಲೀಸ್ ಜಿಮ್‌ಖಾನದ ಕೊಠಡಿ ಸಂಖ್ಯೆ 01 ರಲ್ಲಿ ಮಧ್ಯಾಹ್ನ 03 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು.
ಅದೇ ರೀತಿ ವಿಜಯನಗರ ಜಿಲ್ಲೆಯ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರ ವಿಧಾನಸಭಾ ಕ್ಷೇತ್ರಗಳಿಗೆ ಐಆರ್‌ಎಸ್ ಅಧಿಕಾರಿ ಸುರೇಂದ್ರ ಪೌಲ್ ಕೆ ಮೊ:9141086852 ಅವರು ಹಾಗೂ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ಮತ್ತು ವಿಜಯನಗರ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರಗಳಿಗೆ ಐಆರ್‌ಎಸ್ ಅಧಿಕಾರಿ ಕೆ.ಕ್ರಿಷ್ಣಮೂರ್ತಿ ಮೊ:9141086851 ಅವರು ಚುನಾವಣಾ ವೆಚ್ಚದ ವೀಕ್ಷಕರಾಗಿದ್ದಾರೆ.
ಸಾರ್ವಜನಿಕರಿಗೆ, ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅಹವಾಲು ಇದ್ದಲ್ಲಿ, ಸರ್ಕಾರಿ ಕೆಲಸದ ಎಲ್ಲಾ ದಿನಗಳಲ್ಲಿ ಮಾಹಿತಿ ಸಲ್ಲಿಸಬಹುದಾಗಿದೆ. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಏನಾದರು ದೂರುಗಳಿದ್ದಲ್ಲಿ ಸಾರ್ವಜನಿಕರು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚದ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.