
ಚುನಾವಣೆ ಜಾಗೃತಿ ಜಾಥಾ ಅಭಿಯಾನ ನಮ್ಮ ಮತ ದೇಶಕ್ಕೆ ಹಿತ : ಡಾ.ಬಿ.ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಸಿರುಗುಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣಾ 2024ರ ಕುರಿತು ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಅಂಗವಾಗಿ ಮತದಾನ ಜಾಗೃತಿ ಜಾಥಾ ಅಭಿಯಾನವು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮತದಾನ-ನಮ್ಮ ಹಕ್ಕು ನಮ್ಮ ಮತ- ನಮ್ಮ ಆಯ್ಕೆ ಯಾವ ಭಯವಿಲ್ಲದೆ-ಮತದಾನ ಮಾಡೋಣ 18ವರ್ಷ ಮೇಲ್ಪಟ್ಟವರು- ಕಡ್ಡಾಯವಾಗಿ ಮತದಾನ ಮಾಡಿ ನಮ್ಮ ಮತ- ದೇಶಕ್ಕೆ ಹಿತ
ಎಂಬ ಘೋಷಣೆಗಳೊಂದಿಗೆ ಆರೋಗ್ಯ ತಂಡವು ತಾಲೂಕ ಆರೋಗ್ಯ ಅಧಿಕಾರಿಗಳೊಂದಿಗೆ ವಾರ್ಡ್ 30ರಲ್ಲಿ ಸಾಗುತ್ತಾ ಸುತ್ತು ಹಾಕಿ ಜನರಿಗೆ ಜಾಗೃತಿ ಮೂಡಿಸಿತು.
ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಈರಣ್ಣರವರು ಮಾತನಾಡಿ ಮೇ ಏಳರ ದಿನ ಮತದಾನರ ದಿನ ಅಮೂಲ್ಯವಾದ ಮತದಾನ ದೇಶಕ್ಕೆ ಹಿತ ಇದು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಆದ್ದರಿಂದ 18 ವರ್ಷ ಮೇಲ್ಪಟ್ಟವರೆಲ್ಲರು ಮತ ಚಲಾಯಿಸುವುದು ಆದ್ಯ ಕರ್ತವ್ಯವಾಗಿದೆ ಯಾವುದೇ ಕಾರಣಕ್ಕೂ ಮತ ಹಾಕದೆ ಇರುವಂತಿಲ್ಲ ಎಂದು ತಿಳಿಸಿದರು. ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾಕ್ಟರ್ ಮಲ್ಲಿಕಾರ್ಜುನ ರೆಡ್ಡಿ ಅವರು ಮಾತನಾಡಿ ಮತದಾನ ಮಾಡುವ ಹಕ್ಕು ಭಾರತ ಸಂವಿಧಾನ ಪ್ರಜೆಗಳಿಗೆ ನೀಡಿದ ಅಮೂಲ್ಯ ಹಕ್ಕಾಗಿದೆ ಇದನ್ನು ಹಕ್ಕಿನಿಂದಲೇ ಚಲಾಯಿಸೋಣ ಮೇ ಏಳರ ದಿನದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಆರೋಗ್ಯ ತಾಲೂಕ ಶಿಕ್ಷಣ ಅಧಿಕಾರಿ ಮೊಹಮ್ಮದ್ ಖಾಸಿಂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಅಬ್ದುಲ್ ನಬಿ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ನಾಗಪ್ರಿಯ ರಾಣಿ ಮತ್ತು ಬಿಪಿಎಂ, ತಾಲೂಕು ಸೀನಿಯರ್, ಬಿ ಹೆಚ್ ಈ ಓ, ಎಸ್ ಟಿ ಎಲ್ ಎಸ್, ಎಸ್ ಟಿ ಎಸ್, ಫಾರ್ಮಸಿ ಆಫೀಸರ್, ಲ್ಯಾಬ್ ಟೆಕ್ನಿಷಿಯನ್ಸ್, ಸ್ಟ್ಯಾಫ್ ನರ್ಸ್ , ಹಾಗೂ ಗ್ರೂಪ್ ಡಿ ಮತ್ತು ಆಶಾ ಸಮೂಹ ಹಾಜರಿದ್ದು ಸಹಕಾರ ನೀಡಿದರು.