
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ:11 ಬಿಜೆಪಿ ಪಕ್ಷದ ಟಿಕೆಟ್ ಆಕ್ಷಾಂಷಿಯಾಗಿದ್ದ ಕರಡಿ ಸಂಗಣ್ಣ ನವರಿಗೆ ಟಿಕೆಟ್ ತಪ್ಪಿದ ಕಾರಣ ನಗರದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ಈ ಪೈಕಿ ವೀರೇಶ ಹುಲಿಗಿ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು, ಚಂದ್ರಪ್ಪ ಉಪ್ಪಾರ ನಗರ ಯೋಜನಾ ಪ್ರಾಧಿಕಾರ ಮಾಜಿ ನಿರ್ದೇಶಕರು ಗಂಗಾವತಿ, ಬಸವರಾಜಗೌಡ ಹುಲಿಗಿ ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷರು ಬಂಡಿಹರ್ಲಾಪೂರ, ಪಂಪಣ್ಣ ಪಲ್ಲೇದ ಬಿಜೆಪಿ ಮುಖಂಡರು ಕೊಪ್ಪಳ, ಈಶಪ್ಪ ಚೌಡ್ಕಿ ಬಿಜೆಪಿ ಮುಖಂಡರು ಕೊಪ್ಪಳ ಇವರುಗಳೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಪ್ರಸನ್ನ ಗಡಾದ ನೇತ್ರ ತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.