
ಜಗಜೀವನ್ ರಾಮ್ ಭವನ ಕಾರ್ಯಕ್ರಮಕ್ಕೆ ತೆರಳುವ ಯಾತ್ರಾ ರ್ಥಿಗಳಿಗೆ ಬೀಳ್ಕೊಡುಗೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು ಪ್ರತಿಯೊಬ್ಬ ಭಾರತೀಯರ ಮೂಲಭೂತ ಹಕ್ಕು ಮತ್ತು ಕರ್ತವ್ಯ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ . ರಾಜೇಶ್ವರಿ ಅವರು ಅಭಿಪ್ರಾಯ ಪಟ್ಟರು.
ಸಿರುಗುಪ್ಪ ನಗರದ ತಾಲೂಕು ಕ್ರೀಡಾ ಮೈದಾನದಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಂಬರ್ 1 ನಿಂದ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಭಾರತ ಸರ್ಕಾರದ ಮಾಜಿ ಉಪ ಪ್ರಧಾನಮಂತ್ರಿ ಡಾ ಬಾಬು ಜಗಜೀವನ್ ರಾಮ್ ಅವರ ಸ್ಮರಣೆಗಾಗಿ ಕರ್ನಾಟಕದ ರಾಜಧಾನಿ ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರ ಮಾಗಡಿ ರಸ್ತೆ ಸುಮನ ಹಳ್ಳಿ ಸರ್ಕಲ್ ನಲ್ಲಿ ಅತ್ಯಾಕರ್ಷವಾದ ಡಾ ಬಾಬು ಜಗಜೀವನ್ ರಾಮ್ ಭವನ್ ಮತ್ತು ಸಂಶೋಧನಾ ಸಂಸ್ಥೆ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಲು ಸಿರುಗುಪ್ಪ ತಾಲೂಕಿನಿಂದ ಡಾ ಬಾಬು ಜಗಜೀವನ ರಾಮ್ ಅನುಯಾಯಿಗಳು ಹೋರಾಟಗಾರರು ಸಂಘಟನೆಯ ಮುಖ್ಯಸ್ಥರು ಗಣ್ಯ ನಾಗರಿಕರು ಕಾರ್ಯಕ್ರಮದ ಯಶಸ್ಸಿಗೆ ಭಾಗವಹಿಸಲು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಬಿ ರಾಜೇಶ್ವರಿ ಡಾ ಬಾಬು ಜಗಜೀವನ್ ರಾಮ್ ಸಂಘದ ಗೌರವ ಅಧ್ಯಕ್ಷ ಚಿಕ್ಕ ಬಳ್ಳಾರಿ ನಾಗಪ್ಪ ಅವರು ಜಗಜೀವನ್ ರಾಮ್ ಅವರ ನುಡಿಮುತ್ತುಗಳ ಘೋಷಣೆ ಕೂಗಿದರು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೆಚ್ ಲಿಂಗರಾಜ ರೆಡ್ಡಿ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಹಸಿರು ಧ್ವಜ ನಿಶಾನೆ ಹಾರಿಸುವ ಮೂಲಕ ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಚಾಲನೆ ನೀಡಿ ಬೀಳ್ಕೊಟ್ಟರು ಪ್ರಯಾಣ ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಾಳಪ್ಪ ಕವಲೂರು ಬಾಗೋಡಿ ರಾಮಪ್ಪ ಶಶಿಧರ ದಾವಲ್ ಸಾಬ್ ಚಂದ್ರಶೇಖರ್ ಮೌನೇಶ್ ಅಮರೇಶ್ ನಾಯಕ್ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಶಂಕರ್ ನಾಯಕ್ ಮತ್ತಿತರರು ಇದ್ದರು.