392ed673-c067-4678-ac20-b9709b164ba2

ಜನಪದಿಂದ ನಮ್ಮ ಕಲೆ-ಸಂಸ್ಕೃತಿ ಜೀವಂತ

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೭- ನಮ್ಮ ನಾಡಿನ ಸಮಗ್ರತೆ ಹಾಗೂ ಸಂಸ್ಕೃತಿ ಬಿಂಬಿಸುವಲ್ಲಿ ಜನಪದಿಂದ ಸಾದ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.

ಅವರು ಬುಧವಾರದಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2023-24ನೇ ಸಾಲಿನ ವಿಶೇಷ ಯೋಜನೆಯಡಿ ಜನಪರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ. ಜನಪದಗಳಾದ ಸುಗ್ಗಿಕುಣಿತ, ತತ್ವಪದ, ಗೀಗಿಪದ ಸೇರಿ‌ ಅನೇಕ ಜನಪದ ಕಲೆಗಳು ದಿನನಿತ್ಯದ ಬದುಕಿಗೆ ಹಾಸುಹೊಕ್ಕಾಗಿವೆ. ಇಂತಹ ಕಲೆಗಳಿಗೆ ಪ್ರೋತ್ಸಾಹ ಮತ್ತು ಧರ್ಮಗ್ರಂಥಗಳ ಬಗ್ಗೆ ಸಾರುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ. ಕಲಾವಿದರು ಹಾಗೂ ಜನಪದ ಕಲಾತಂಡಗಳು ಸದುಪಯೋಗ ಪಡಿಸಿಕೊಳ್ಳಬೇಕು, ಕನ್ನಡ ನಾಡಿನ‌ ಹಬ್ಬಗಳು, ಆಚರಣೆಗಳ‌ ಹಿನ್ನಲೆಯನ್ನು ಯುವಪೀಳಿಗೆ, ಮಕ್ಕಳು ತಿಳಿದುಕೊಳ್ಳಬೇಕಿದೆ ಎಂದರು.

ನಮ್ಮದೇಶ ಹಾಗೂ ಕನ್ನಡ ನಾಡಿನ ನುಡಿ, ಕಲಲೆ ಸಂಸ್ಕೃತಿ ಬಿಂಬಿಸುವುದು ಹಾಗೂ ಉಳಿಸಿರುವುದು ಜನಪದ ನಾವು ಸಹ ಮುಂದಿನ ಪಿಳಿಗೆಗೆ ಜನಪದ ಸೇರಿದಂತೆ ಪ್ರಾಚೀನ ಕಲೆಗಳನ್ನು ಜನಾಂಗದಿಂದ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.ಟಿವಿ, ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಮಾರು ಹೋಗಿರುವ ಜನ ಒಂದೆಡೆಯಾದರೆ, ಲಂಬಾಣಿ ನೃತ್ಯ, ತೊಗಲುಗೊಂಬೆ ಕಲೆ, ಹಗಲುವೇಷ ಹೀಗೆ ಹತ್ತಾರು ಕಲೆಗಳನ್ನು ಹಲವು ಸಮುದಾಯಗಳು ಉಳಿಸಿಕೊಂಡು ಬಂದಿದ್ದು ಮುಂದಿನ ಪಿಳಿಗೆಗೆ ಕೊಡುಗೆ ಯಾಗಿ ನೀಡಬೇಕು ಎಂದು ಕರೆ ನೀಡಿದರು.

ಕಾಎಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ನಾಡಿನ ಕಲೆಯಲ್ಲಿ ತೊಡಗಿರುವ ಕಲಾವಿದರಿಗೆ ವೇದಿಕೆ ಒದಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಈ ವೇಳೆ ಶಹನಾಯಿ, ಶಾಸ್ತ್ರೀಯ ಸಂಗೀತ, ಬಯಲಾಟ, ಲಂಬಾಣಿ‌ ನೃತ್ಯ, ಸುಗ್ಗಿ ಕುಣಿತ, ಸುಗಮ ಸಂಗೀತ, ಗಾರುಡಿ ಗೊಂಬೆ, ಕೀಲು ಕುದುರೆ ಸೇರಿದಂತೆ ಹಲವು ಜಾನಪದ ಕಲೆಗಳು ಪ್ರಸ್ತುತಗೊಳ್ಳಲಿವೆ ಕಲಾವಿದರು ಇದರ ಸದುಪಯೋಗ ಪಡೆದು ಕೊಳ್ಳ ಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ್ದ ಕಲಾವಿದರು ಹಲವು ಕಲೆಗಳನ್ನು ಪ್ರಸ್ತುತ ಪಡಿಸಿದರು. ಹಿರಿಯ ಕಲಾವಿದ ಮಾರೆಪ್ಪ ಚನ್ನದಾಸರ್, ಕವಯತ್ರಿ ಸಾವಿತ್ರಿ ಮುಜಮದಾರ, ನಾನಾ ಶಾಲಾ – ಕಾಲೇಜಿನ‌ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!