
ಗಾನ ಗಂಧರ್ವ ಕಲಾ ಸಂಸ್ಥೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ
ಜನಪದ ಸುಗಮ ಸಂಗೀತ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ಗಾನ ಗಂಧರ್ವ ಕಲಾ ಸಂಸ್ಥೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜನಪದ ಸುಗಮ ಸಂಗೀತ ಸಂಭ್ರಮ ಕಾರ್ಯಕ್ರಮ ದಿ.೨೪ರಂದು ರವಿವಾರ ಸಂಜೆ ಕೊಪ್ಪಳ ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಜನಪದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟನೆಯನ್ನು ನಗರಸಭೆ ಮಾಜಿ ಸದಸ್ಯ ಹಾಗೂ ಸಮಾಜ ಸೇವಕರಾದ ಪಾಷಾ ಮಾನ್ವಿಯವರು ನೆರವೇರಿಸಿ ಕನ್ನಡ ಸಂಸ್ಕೃತಿ ಇಲಾಖೆಗೆ ಈಗ ನಮ್ಮ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರು ಕನ್ನಡ ಸಂಸ್ಕೃತಿ ಇಲಾಖೆಗೆ ಸಚಿವರಾಗಿ ಬಂದಮೇಲೆ ಜಿಲ್ಲೆಯ ಕಲಾವಿದರಿಗೆ ಅತ್ಯಂತ ಹೆಚ್ಚು ಅವಕಾಶಗಳು ದೊರಕುತ್ತಿದ್ದು ಇದು ಸಂತಸದ ವಿಷಯ ಎಂದು ಹೇಳಬಹುದು ಜಿಲ್ಲೆಯ ಕಲಾವಿದರು ಅವಕಾಶಗಳನ್ನು ಬಳಸಿಕೊಂಡು ರಾಷ್ಟç- ರಾಜ್ಯಮಟ್ಟದಲ್ಲಿ ಕೊಪ್ಪಳ ಜಿಲ್ಲೆಯ ಹೆಸರು ತನ್ನಿ ನಾವು ಎಲ್ಲಾರು ಕಲಾವಿದರನ್ನು ಪ್ರೋತ್ಸಾಹಿಸೋಣ ಎಂದರು.
ಮುಖ್ಯ ಅತಿಥಿಗಳಾಗಿ ಕಲಾವಿದ ವಿರೇಶ್ ಬಡಿಗೇರ್,ಅಲ್ಲಭಕ್ಷಿ ವಾಲಿಕಾರ, ತೊಟೇಶ್ ಬೆಲ್ಲದ ಪಾಲ್ಗೋಂಡು ಮಾತನಾಡಿದರು ನಂತರ ಶ್ರೀಮತಿ ಶರಾವತಿ ತಂಡದಿAದ ಜಾನಪದ ಮತ್ತು ಗಾಯಕ ಬಾಷಾಹಿರೇಮನಿ ತಂಡದವರಿAದ ಯವರಿಂದ ಜಾನಪದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.