
ಜನರ ಸೇವೆಗಾಗಿ ಪ್ರಿಯಾಂಕ ಸೇವಾ ಸಂಘ ಸದುಪಯೋಗ ಮಾಡಿಕೊಳ್ಳಿ : ಪ್ರಿಯಾಂಕ ಜೈನ್
ಕರುನಾಡ ಬೆಳಗು ಸುದ್ದಿ
ವಿಜಯನಗರ,8- ಪ್ರಿಯಾಂಕ ಸೇವಾ ಸಂಘವು ಆಸ್ತಿತ್ವಕ್ಕೆ ಬಂದು ಒಂದು ವರ್ಷಕಳೆಯುತ್ತಿದೆ. ಸಂಘವು ದುರ್ಬಲ ಮಹಿಳೆಯರ ಸೇವೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವರ ಆರ್ಥಿಕತೆಗೆ ಅನುಕೂಲವಾಗಲೆಂದು ಶ್ರಮಿಸುತ್ತಿದೆ. ಹಾಗಾಗಿ ದುರ್ಭಲ ಬಡ ಮಹಿಳೆಯರು ಉಚಿತವಾಗಿರುವ ಸಂಘದ ಸೇವೆಗಳನ್ನು ಸದುಪಯೋಗ ಪಡೆದು ಕೊಳ್ಳಲು ಪ್ರಿಯಾಂಕ ಜೈನ್ ಹೇಳಿದರು.
ಸಂಘದ ಅಧ್ಯಕ್ಷರಾದ ಪ್ರಿಯಾಂಕ ಜೈನ್, ಪ್ರಿಯಾಂಕ ಸೇವಾ ಸಂಘದ ಕಛೇರಿಯಲ್ಲಿ ಭುದವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು ಬಡ ಮಹಿಳೆಯರಲ್ಲಿ ಕೌಶಲ್ಯತೆ ಹೆಚ್ಚಿಸಲು ಸೀರೆ ಎಂಬರಾಯಿಡಿಂಗ್, ಬ್ಲೌಸ್ ಸ್ಟಿಚಿಂಗ್, ನೂತನ ಉಡುಪುಗಳ ವಿನ್ಯಾಸ, ಇತರೆ ಡಿಸೈನಿಂಗ್ ಗಳ ತರಭೆತಿಯನ್ನು ನೀಡಿ ಅವರ ಆರ್ಥಿಕ ಹೊರೆ ಕಡಿಮೆಮಾಡಿ ಸ್ವಯಂ ಪ್ರೇರಿತರಾಗಿ ಬದುಕುವಂತೆ ಮಾಡಲು ಪ್ರಯತ್ನಿಸಲಾಗುವುದು. ಇನ್ನೂ ಮೂರು ತಿಂಗಳಲ್ಲಿ ಹೊಲಿಗೆ ತರಬೇತಿ, ಅಗರ್ ಬತ್ತಿ ತಯಾರಿಕೆ ಕಾರ್ಯಕ್ರಮ ಆರಾಂಬಿಸ ಲಾಗುವುದು. ತರಬೇತಿ ಮುಗಿದ ನಂತರ ನಮ್ಮ ಸಂಘದಿಂದ ಪ್ರಮಾಣ ಪತ್ರವನ್ನು ನೀಡಿ ಉದ್ಯೋಗ ಪ್ರಾರಂಭಿಸಲು ಆರ್ಥಿಕವಾಗಿ ಸಹಕಾರ ಮಾಡಲಾಗುವುದು ಎಂದು ತಿಳಿಸದರು.
ಜನರಿಗೆ ಅನುಕೂಲವಾಗಲು ಸರ್ಕಾರದಿಂದ ಸಹಕಾರ ದೊರಕಿದರೆ ಅದನ್ನು ಪರಿಗಣಿಸಿ ಸರ್ಕಾರದೊಂದಿಗೆ ಸಹಯೋಗದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಲು ಸಂಘವು ಸದಾ ಸಿದ್ದವಾಗಿದೆ. ಹಾಗಾಗಿ ದುರ್ಬಲ ಮಹಿಳೆಯರು ನಮ್ಮನ್ನು ಸಂಪರ್ಕಿಸಿ ಇಲ್ಲಿನ ತರಭೆತಿಗಳನ್ನು ಪಡೆದು ಸಬಲರಾಗಬೇಕೆಂದು ಸುದ್ದಿಗೊಷ್ಟಿಯಲ್ಲಿ ಮಾತನಾಡಿದರು.