DSC_7800

ಜನಸಾಗರಕ್ಕೆ ಗವಿಸಿದ್ದೇಶನ ಶಕ್ತಿ ,

ನಿಮ್ಮ ಭಕ್ತಿ ಸಾಕ್ಷಿ – ಗವಿ ಶ್ರೀ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , ೨೭- ಮಹಾ ಮಹಿಮ ಗವಿಸಿದ್ದೇಶ ನಾಡಿನ ಲಕ್ಷಾಂತರ ಭಕ್ತರ ಹೃದಯದಲ್ಲಿ ನೆಲೆಸಿದ್ದಾನೆ. ಈ ಜನಸಾಗರ ಸೇರಲು ಕೇವಲ ಎರಡು ಶಕ್ತಿಗಳಿಂದ ಮಾತ್ರ. ಅವುಗಳೆಂದರೆ ಒಂದು ಗವಿಸಿದ್ದೇಶನ ಶಕ್ತಿ ಇನ್ನೊಂದು ಭಕ್ತರ ಭಕ್ತಿಯ ಶಕ್ತಿಯಿಂದ ಜಾತ್ರೆ ಇಷ್ಟೊಂದು ಅದ್ಧೂರಿಯಾಗಿ ನಡೆಯುತ್ತಿದೆ ಎಂದು ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಹೇಳಿದರು.
ಅವರು ಶ್ರೀ ಗವಿಸಿದ್ದೇಶ್ವರ ರಥೋತ್ಸವ -೨೦೨೪ರ ಸಂದರ್ಭದಲ್ಲಿ ಭಕ್ತರಿಗೆ ಆಶೀರ್ವಚನ ನೀಡುತ್ತ, ಗವಿಸಿದ್ದೇಶ ನಾಡಿನ ಲಕ್ಷಾಂತರ ಹೃದಯದಲ್ಲಿ ನೆಲೆಸಿದ್ದಾನೆ , ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ಮೂರು ಅಕ್ಷರ ಲಕ್ಷಾಂತರ ಭಕ್ತರ ಒಂದೆಡೆ ಸೇರಲು ಕಾರಣವಾಗಿದೆ ಎಂದರು.
ರಥೋತ್ಸವದ ನಂತರ ಭಕ್ತರು ನಿಧಾನವಾಗಿ ಮನೆಗೆ ತೆರಳಿದಾಗ ನನಗೆ ಸಂತೋಷವಾಗುತ್ತದೆ. ಅಲ್ಲದೇ ೆ ಗವಿಮಠದ ಭಕ್ತರು ನಾಡಿಗೆ ಮಾದರಿಯಾಗಿದ್ದು ಶಾಂತಿ, ಶಿಸ್ತಿಗೆ ಹೆಸರು ವಾಸಿಯಾಗಿದ್ದೀರಿ ಎಂದು ಹೇಳಿದರು.
ಇಂದು ಉದ್ಘಾಟನೆಗೆ ಆಗಮಿಸಿರುವ ಸುತ್ತೂರು ಶ್ರೀಗಳು ನೂರಾರು ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಲಕ್ಷಾಂತರ ಬಡ ಮಕ್ಕಳ ಅಕ್ಷರದ ದೀಪ ಹಚ್ಚುವ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವ ಭಗವಂತ ಖೂಬಾ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಶರಣೇ ಗೌಡ ಬಯ್ಯಾಪುರ, ಹೇಮಲತಾ ನಾಯಕ್, ಮಾಜಿ ಸಚಿವ ನಾಡಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ರಾಜಶೇಖರ ಹಿಟ್ನಾಳ, ಅಂದಾನಪ್ಪ ಅಗಡಿ ಸೇರಿದಂತೆ ಅನೇಕರಿದ್ದರು.

ಮಹಾ ಮಹಿಮ ಗವಿಸಿದ್ಧೇಶ್ವರನ ಜಾ ತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಮಹಾರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿ ಸಿದ್ದು ವಿಶೇಷವಾಗಿತ್ತು.ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಿಂದ ರಾತ್ರಿ ಇಡಿ ಪಾ ದಯಾತ್ರೆಗೆ ಬಂದ ಭಕ್ತರು ಶ್ರೀ ಗವಿಸಿದ್ಧೇಶ್ವರನ ಕತೃ ಗದ್ದುಗೆಯ ದರ್ಶನ ಪಡೆದು ಪುನಿತರಾ ದರು. ಶನಿವಾರ ಸಂಜೆ ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಿಂದ ಪಾದಯಾತ್ರಿಗಳ  ಆಗಮನ ಇರುವೇಯ ಸಾಲಿ ನಂತೆ ಭಾಸವಾಗುತ್ತಿತ್ತು.
ನೀರಿನ ವ್ಯವಸ್ಥೆ: ಪಾದ ಯಾತ್ರಿಗಳಿಗೆ ಭಕ್ತರಿಂದ ಕುಷ್ಟಗಿ ರಸ್ತೆ, ಗದಗ ರಸ್ತೆ, ಹೊಸಪೇಟೆ ರಸ್ತೆ, ಸಿಂದೋಗಿ ರಸ್ತೆ ಸೇರಿದಂತೆ ವಿವಿಧಡೆ ಕೊಪ್ಪಳ ನಗರ ಪ್ರದೇಶದ ಕಡೆ ಕುಡಿಯುವ ನಿರು ನೀಡಿ ಪಾದಯಾತ್ರೆ ನಿರತ ಭಕ್ತರನ್ನು ಸ್ವಾಗತಿಸಿದ್ದು ವಿಶೇಷ ವಾಗಿತ್ತು.
ದರ್ಶನಕ್ಕೆ ಸರದಿ: ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆ ದರ್ಶನಕ್ಕೆ ಸೋಮ ವಾರ ರಾತ್ರಿಯಿಂದ ಸರದಿಯಲ್ಲಿ ನಿಮತು ದರ್ಸನ ಪಡೆದು ಪುನಿತರಾದರೇ ರಾತ್ರಿ ಇಡಿ ಗವಿಸಿದ್ಧೇಶ್ವರನಿಗೆ ನೈವೇಧ್ಯ ವಿಶೇಷ ಪೂಜೆಗಳು ಜರುಗಿ ದವು.
ದೀರ್ಘದಂಡ ನಮಸ್ಕಾರ: ಸಹಸ್ರಾರು ಭಕ್ತರಿಂದ ಶುಕ್ರವಾರ ರಾತ್ರಿಯಿಂದಲೆ ದೀರ್ಘ ದಂಡ ನಮಸ್ಕಾರದಲ್ಲಿ ಭಕ್ತರು ತಮ್ಮ ಇಷ್ಟತಿರ್ಥ ಹರಕೆ ತೀರಿಸಿ ದರು.
ಪ್ರಸಾದ:  ಮಹಾ ದಾಸೋಹ ಭವನದಲ್ಲಿ ಪ್ರಸಾದ ವನ್ನು ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಸೇವಿಸಿದರು.

Leave a Reply

Your email address will not be published. Required fields are marked *

error: Content is protected !!