
ಜನಾರ್ದನ ರೆಡ್ಡಿ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ
ಶೀಘ್ರ ಆನೆಗುಂದಿ ಉತ್ಸವ ಘೋಷಣೆ : ತಂಗಡಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ರಾಜ್ಯ ಸರ್ಕಾರ ಆನೆಗೊಂದಿ ಉತ್ಸವವನ್ನು ಸಹ ನಿರ್ಲಕ್ಷ ಮಾಡುವುದಿಲ್ಲ ಆನೆಗೊಂದಿ ಉತ್ಸವದ ದಿನಾಂಕವನ್ನೂ ಘೋಷಣೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಶನಿವಾರದಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ನಾನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ. ಆನೆಗೊಂದಿಯೂ ನನ್ನ ಜಿಲ್ಲೆಯಲ್ಲೇ ಇದೆ. ಆನೆಗೊಂದಿ ಉತ್ಸವ ಮಾಡುವುದೂ ನನ್ನ ಜವಾಬ್ದಾರಿ ನಾನು ನಿಭಾಯಿಸುವೆ ಎಂದರು.
ಜನಾರ್ದನ ರೆಡ್ಡಿ ಜವಾಬ್ದಾರಿಯುತ ಶಾಸಕರಾಗಿ ಸರಕಾರಕ್ಕೆ ಉತ್ಸವ ಆಚರಣೆಗೆ ಲಿಖಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಿ. ತಾವು ಮಾಡುವ ಕೆಲಸ ಬಿಟ್ಟು ಬೇರೆಯವರಿಗೆ ಉಪದೇಶ ಹೇಳುವುದು ಸರಿಯಲ್ಲ. ಕನಕಗಿರಿ ಉತ್ಸವದಲ್ಲಿ ಕಪ್ಪು ಭಾವುಟ ಪ್ರದರ್ಶಿಸಲಿ. ಕನಕಗಿರಿ ಕ್ಷೇತ್ರದ ಜನರು ಇವರಿಗೆಲ್ಲ ತಕ್ಕ ಉತ್ತರ ಕೊಡುತ್ತಾರೆ ಅವರ ಜವಾಬ್ದಾರಿ ಅವರು ಅರಿಯಲಿ ಎಂದರು.
ಕೊಪ್ಪಳ ಜಿಲ್ಲೆಯ ಅಕ್ರಮ ಚಟುವಟಿಕೆಯಲ್ಲಿ ಸಚಿವರ ಸಹೋದರರು ಭಾಗಿಯಾಗಿದ್ದಾರೆ ಎಂಬ ಜನಾರ್ದನ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ನಾನು ದಿನದ 24 ಗಂಟೆ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಮಿಸ್ ಕಾಲ್ ಇದ್ದರೂ ವಾಪಾಸ್ ಕಾಲ್ ಮಾಡುತ್ತೇನೆ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ದಿ ನಮ್ಮ ಗುರಿಯಾಗಿದೆ , ಜನಾರ್ದನ ರೆಡ್ಡಿ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿದೆ. ನಾನು ಸುಂಕಲಮ್ಮ ದೇವಸ್ಥಾನ ಹೊಡೆದಿಲ್ಲ. ಆಂಧ್ರ- ಕರ್ನಾಟಕ ಗಡಿ ನಾಶ ಮಾಡಿಲ್ಲ ಜನಾರ್ದನ ರೆಡ್ಡಿ ಅವರು ಏನಂತ ಎಲ್ಲರಿಗು ಗೋತ್ತು ಎಂದರು.