
16 ರಂದ ಜಾಗತಿಕ ಲಿಂಗಾಯತ ಜಿಲ್ಲಾ ಮಟ್ಟದ ಸಮಾವೇಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಮಧುಶ್ರೀ ಗಾರ್ಡನ್ನಲ್ಲಿ ಇಂದು ಜೂ. 16ರಂದು ಸಂಜೆ 5 ಗಂಟೆಗೆ ಲಿಂಗಾಯತರ ಜಿಲ್ಲಾಮಟ್ಟದ ಸಮಾವೇಶ ಜರುಗಲಿದೆ ಎಂದು ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಗವಿಸಿದ್ದಪ್ಪ ಹಾಗೂ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ತಿಳಿಸಿದರು.
ಅವರು ಕೊಪ್ಪಳ ಮೀಡಿಯಾ ಕಗಲಬ್ ನಲ್ಲಿ ಮಾತನಾಡಿ ಇಂದು ಬೆಳಿಗ್ಗೆ 10.30ಕ್ಕೆ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸಂಜೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದಾಜು ಎರಡು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ’.
‘ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಮಹತ್ವ ಹಾಗೂ ಸಂದೇಶಗಳನ್ನು ಬಿತ್ತರಿಸಲು ಸಮಾವೇಶ ವೇದಿಕೆಯಾಗಲಿದ್ದು, ಲಿಂಗಾಯತ ಧರ್ಮ ವಿವಿಧ ನೆಲೆಗಳ ಚಿಂತನೆಗಳು, ಜಾಗತಿಕ ಲಿಂಗಾಯತ ಮಹಾಸಭೆ ಕೆಲಸಗಳು ಮತ್ತು ಉದ್ದೇಶಗಳ ಬಗ್ಗೆ ಚರ್ಚೆ ನಡೆಯಲಿದೆ. ಲಿಂಗಾಯತ ಧರ್ಮದ ಆಳ ಮತ್ತು ವಿಸ್ತಾರವಾದ ಜ್ಞಾನವನ್ನು ಸಮಾವೇಶದ ಮೂಲಕ ಸಾರುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.
ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ’ಜಾಗತಿಕ ಲಿಂಗಾಯತ ಮಹಾಸಭೆ ಇಂದು–ಮುಂದೆ’, ಬಸವ ಸಮಿತಿ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ಅವರು ‘ನಾನು ಲಿಂಗಾಯತ’, ಚಿಂತಕಿ ಮೀನಾಕ್ಷಿ ಬಾಳಿ ‘ಸ್ತ್ರೀ ಕುಲೋದ್ದಾರಕ ಬಸವಣ್ಣ‘ ವಿಷಯಗಳ ಕುರಿತು ಮಾತನಾಡಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಅಧ್ಯಕ್ಷತೆ ವಹಿಸುವರು. ಸಂಡೂರಿನ ಸಂಸ್ಥಾನ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ತಾಲ್ಲೂಕು ಅಧ್ಯಕ್ಷ ದಾನಪ್ಪ ಶೆಟ್ಟರ್ ಮತ್ತು ಜಿಲ್ಲಾ ಕಾರ್ಯದರ್ಶಿ ರಾಜು ಸಸಿಮಠ ಇದ್ದರು.
ಸಮಾವೇಶಕ್ಕೆ ಬಸ್ ವ್ಯವಸ್ಥೆ : ಸಮಾವೇಶಕ್ಕೆ ಬರುವವರಿಗೆ ಸಂಜೆ 4 ಗಂಟೆಯಿಂದ ಕೊಪ್ಪಳದ ಮೂರು ಮಾರ್ಗಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಮೊದಲ ಮಾರ್ಗದಲ್ಲಿ ಮಹಾವೀರ ಭವನದಿಂದ ಗಡಿಯಾರ ಕಂಬ, ಶಾರದಾ ಚಿತ್ರಮಂದಿರ, ಗವಿಶ್ರೀ ನಗರ 3 ಹಾಗೂ 2ನೇ ಕ್ರಾಸ್, ಬಸವೇಶ್ವರ ವೃತ್ತ, ಮಾತಾ ಹೋಟೆಲ್, ಬಿ.ಎಸ್ಲ. ಪವಾರ್ ಹೋಟೆಲ್ನಿಂದ ಮಧುಶ್ರೀ ಗಾರ್ಡನ್ ತನಕ, ಎರಡನೇ ಮಾರ್ಗದಿಂದ ಜಾಂಗಡಾ ಅವರ ಮನೆಯ ಕ್ರಾಸ್ನಿಂದ ಕೋಟೆ ಮಹೇಶ್ವರ ದೇವಸ್ಥಾನ, ಟಾಂಗಾ ಕೂಟ, ಕಿತ್ತೂರು ಚನ್ನಮ್ಮ ವೃತ್ತ, ಕವಲೂರು ಓಣಿ, ಕಾವ್ಯಾನಂದ ಪಾರ್ಕ್, ಬಿ.ಟಿ. ಪಾಟೀಲ ನಗರ 3 ಮತ್ತು 1ನೇ ಕ್ರಾಸ್, ಮಾತಾ ಹೋಟೆಲ್ ಮಾರ್ಗದಲ್ಲಿ ಕಾರ್ಯಕ್ರಮ ಸ್ಥಳ, ಮೂರನೇ ಮಾರ್ಗದಲ್ಲಿ ಬಸವ ನಗರ, ಲೇಬರ್ ಸರ್ಕಲ್, ಭಾಗ್ಯನಗರ ಕಿನ್ನಾಳ ರಸ್ತೆ, ಓಜಿನಹಳ್ಳಿ ಕ್ರಾಸ್, ರಾಮಚಂದ್ರರಾವ್ ಬಡಾವಣೆ ಕ್ರಾಸ್, ಕಲ್ಯಾಣ ನಗರ, ಅಶೋಕ ಸರ್ಕಲ್ ಮತ್ತು ಗಂಜ್ ರಸ್ತೆಯಿಂದ ಕಾರ್ಯಕ್ರಮ ಸ್ಥಳಕ್ಕೆ ಬಸ್ಗಳು ತೆರಳಲಿವೆ ಸಾರ್ವಜನೀಕರು ಇದರ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕು.