
ಜಿಲ್ಲಾಡಳಿತ ಕೋವಿಡ್ ಎದುರಿಸಲು ಸಿದ್ದ – ಸಚಿವ ತಂಗಡಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೩- ಕೇರಳಾ ನಂತರ ರಾಜ್ಯದಲ್ಲಿಯು ಕೋವಿಡ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು ಕೋವಿಡ್ ಬಂದು ಅಪಾಯ ತಂದೊಡ್ಡಕ್ಕಿಂತ ಮುಂಚಿತವಾಗಿ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೋವಿಡ್ ಮುಂಜಾಗ್ರತಾ ಸಭೆಯ ನಂತರ ಜರುಗಿದ ಗೋಷ್ಠಿಯಲ್ಲಿ ಮಾತನಾಡಿದರು. ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆಗೆ ಬೆಡ್ ವ್ಯವಸ್ಥೆ ಏರ್ಪಾಡು ಮಾಡಿ, ಜನರಿಗೆ ಕೋವಿಡ್ ವಿಚಾರದಲ್ಲಿ ತೊಂದರೆಯಾಗಬಾರದು.
ಈ ಬಾರಿ ಜೆ-1 ಪರಿಣಾಮಕಾರಿಯಾಗುವುದಿಲ್ಲ ಎಂದರೂ ಎಚ್ಚರಿಕೆ ಅಗತ್ಯ ಜನರಲ್ಲಿ ಅಗತ್ತಯ ಜಾಗೃತಿ ಮೂಡಿಸಿ.ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 122 ಟೆಸ್ಟ್ ಮಾಡಲಾಗಿದ್ದು, 58 rat, rtpcr 64 ಮಾಡಲಾಗಿದೆ. ಈವರೆಗೆ ಕೋವಿಡ್ ಕೇಸ್ ಪತ್ತೆಯಾಗಿಲ್ಲ. ಪ್ರಕರಣ ಕಂಡು ಬಂದರೆ ಹೋಂ ಐಶುಲೇಷನ್ ಮಾಡಲಾಗುವುದು. ಕೇರಳ, ಹೊರ ದೇಶದಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ದಿನಕ್ಕೆ 70 ಜನರನ್ನು ಪರೀಕ್ಷೆ ಮಾಡಬೇಕು ಎಂದು ಗುರಿ ನೀಡಲಾಗಿದೆ. ಇದರಲ್ಲಿ 49 rtpcr 21 rat test ಮಾಡಬೇಕಿದೆ ಎಂದು ಹೇಳಿದರು.
ತರಾಟೆ: ಗೋಷ್ಠಿಗೂ ಮೊದಲು ಕೋವಿಡ್ ಸಭೆ ನಡೆಸಿದ ಸಚಿವರು ಸಭೆಯಲ್ಲಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದುರುಗಳಿವೆ ಜಿಲ್ಲಾಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ರೋಗಿಗಳು ಮಲಗುತ್ತಿದ್ದಾರೆ.
ವೈದ್ಯರು ಸುಮ್ಮನೆ ಕುಳಿತಿದ್ದಾರೆ. ಆದರೆ, ಚೀಟಿಗಾಗಿ ನಾಲ್ಕು ಲೈನ್ ಇದೆ ಎಂದರೇ ಏನರ್ಥ. ಸ್ವಚ್ಛತೆಯಂತೂ ಕೇಳಲೇಬೇಡಿ. ಆಸ್ಪತ್ರೆ ಸರಿಯಾಗಿ ನಿಭಾಯಿಸುತ್ತಿಲ್ಲ. ಮೆಟ್ಟಿಲು ಮೇಲೆ ರೋಗಿಗಳು ಮಲಗಿದ್ದಾರೆ.
ನಿಮ್ಮ ಮನೆಯ ಮೇಲೆ ಮಲಗಿದರೇ ಹೀಗೆ ಸುಮ್ಮನೆ ಇರತಿರಾ ಎಂದು ಕಿಮ್ಸ್ ನಿರ್ದೇಶಕ ವೈಜನಾಥ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ನೀವು ಮುಂದೆ ನಿಂತು ಕೆಲಸ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ ಅಲ್ಲಿಯ ಬೇಟಿ ನೀಡಿ ಅವ್ಯವಸ್ತೆ ಸರಿಪಡಿಸಿ ಎಂದು ಸೂಚಿಸಿದರು.
ಜಿಲ್ಲಾ ಕೇಂದ್ರದಲ್ಲಿ 250 ಹಾಸಿಗೆಗಳಿಗೆ ಆಕ್ಸಿಜನ್ ನೇಟೆಡ್ ಸೌಲಭ್ಯವಿದೆ. ಉಳಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್ ಓ ಡಾ.ಲಿಂಗರಾಜು ಸಭೆಗೆ ವಿವರಿಸಿದರು.ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ ಕೋವಿಡ್ ಹಾಸ್ಪಿಟಲ್ ಕೊಟ್ಟಿರಲಿಲ್ಲ. ಈ ಬಾರಿ ಮರೆಯದೇ ಕೊಡಿ.
ಶ್ರೀರಾಮನಗರ, ಕಾರಟಗಿ, ಕನಕಗಿರಿಯಲ್ಲಿ 30 ಬೆಡ್ ಹಾಸ್ಪಿಟಲ್ ಇವೆ.ಇವುಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ಥಾವನೆ ಸಲ್ಲಿಸಿ.ಕನಕಗಿರಿಯಲ್ಲಿ ವೈದ್ಯರು ಇಲ್ಲ. ಇಬ್ಬರು ವೈದ್ಯರನ್ನು ಕೊಡಲೇಬೇಕು. ಜಿಲ್ಲಾ ಉಸ್ತುವಾರಿ ಕ್ಷೇತ್ರಕ್ಕೆ ವೈದ್ಯರಿಲ್ಲ ಎಂದು ಜನ ಮಾತನಾಡುತ್ತಿದ್ದಾರೆ. ಕೂಡಲೇ ಸಮಸ್ಯೆ ಸರಿಪಡಿಸಿ ಎಂದು ಸಚಿವರು ನಿರ್ದೇಶನ ನೀಡಿದರು.
ಸಬೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಬಂದು ಆರಾಮಾಗಿ ಹೋಗಬೇಕು. ಅಲ್ಲಿ ಸ್ವಚ್ಚತೆ ಹಾಗೂ ಉತ್ತಮ ವೈಧ್ಯಕೀಯ ಸೇವೆಗೆ ಆಧ್ಯತೆ ನೀಡಿ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ನಳೀಲ್ ಅತುಲ್, ಎಸ್ಪಿ ಯಶೋಧಾ ವಂಟಗೋಡಿ, ಎಡಿಸಿ ಸಾವಿತ್ರಿ ಬಿ.ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ ಸೇರಿ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಇದ್ದರು.