
ಜಿಲ್ಲಾ ಗ್ರಾಹಕರ ಆಯೋಗದಿಂದ ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,19- ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನಿರ್ದಿಷ್ಟ ಅವಧಿ ಮೀರಿದ ಕಡತಗಳನ್ನು ನಾಶಪಡಿಸುವಂತೆ ಸುತ್ತೋಲೆಯನ್ನು ಹೊರಡಿಸಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಬೇಕಾಗಿರುವುದರಿಂದ ಪಕ್ಷಕಾರರ ಹಾಗೂ ನ್ಯಾಯವಾದಿಗಳ ಯಾವುದಾದರೂ ಮೂಲ ದಾಖಲೆ, ಇನ್ನಿತರೆ ದಾಖಲೆಗಳು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಇದ್ದರೆ, ಅದನ್ನು ಹಿಂಪಡೆಯುವಂತೆ ತಿಳಿಸಿದೆ.
ರಾಜ್ಯ ಆಯೋಗದ ಸುತ್ತೋಲೆಯ ಅನುಸಾರ ಮತ್ತು ಗ್ರಾಹಕರ ಸಂರಕ್ಷಣಾ ರೆಗ್ಯೂಲೇಶನ್-2005ರ ನಿಯಮ 20(1) ರಿಂದ (5)ರವರೆಗೆ ಇರುವ ನಿಯಮಗಳನ್ನು ಅನುಸರಿಸಿಕೊಂಡು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಜನವರಿ-2016ರಿಂದ ಡಿಸೆಂಬರ್-2018ರವರೆಗೆ ದಾಖಲಾಗಿ ಡಿಸೆಂಬರ್-2023ರ ಅಂತ್ಯಕ್ಕೆ ವಿಲೇಗೊಂಡು 05 ವರ್ಷ ಅವಧಿ ಮೀರಿದ ಗ್ರಾಹಕರ ಪ್ರಕರಣಗಳು ಮತ್ತು ಜನೇವರಿ-2018ರಿಂದ ಡಿಸೆಂಬರ್-2020ರವರೆಗೆ ದಾಖಲಾಗಿ ಡಿಸೆಂಬರ್-2023ರ ಅಂತ್ಯಕ್ಕೆ ವಿಲೇಗೊಂಡು 03 ವರ್ಷ ಅವಧಿ ಮೀರಿದ ಅಮಲ್ ಜಾರಿ (ಎಕ್ಷಿಕ್ಯೂಶನ್ ಅರ್ಜಿಗಳು (ಇ.ಎ.))ಪ್ರಕರಣಗಳ ಕಡತಗಳನ್ನು ಯಾವುದೇ ಪಾವತಿಗಾಗಿ ಬಾಕಿ ಇಲ್ಲದೇ ಇರುವಂತಹ ಕಡತಗಳು ಹಾಗೂ ಯಾವುದೇ ಮೇಲ್ಮನವಿ, ರಿಟ್ ಅರ್ಜಿ, ಪುನರ್ ಪರಿಶೀಲನಾ ಅರ್ಜಿಗಳು ಮತ್ತು ಯಾವುದೇ ತಡೆಯಾಜ್ಞೆಗಳು ಬಾಕಿ ಇಲ್ಲದೇ ಇರುವಂತಹ ಪ್ರಕರಣಗಳ ಕಡತಗಳನ್ನು ನಾಶಪಡಿಸಲು ಕ್ರಮ ವಹಿಸಬೇಕಾಗಿದೆ.
ಆದುದರಿಂದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಹಳೆ ಸಿವಿಲ್ ನ್ಯಾಯಾಲಯದ ಕಟ್ಟಡ, ಜವಾಹರ ರೋಡ್, ಕೊಪ್ಪಳ-583231ರಲ್ಲಿ ಕಚೇರಿಯಲ್ಲಿ ಮೇಲೆ ತಿಳಿಸಿದ ಅವಧಿಯ ಹಾಗೂ ಪ್ರಕರಣಗಳ ಕಡತಗಳಲ್ಲಿ ಮೂಲ ದಾಖಲೆಗಳು ಅಥವಾ ಇನ್ನಿತರ ಯಾವುದೇ ದಾಖಲೆಗಳು ಇದ್ದಲ್ಲಿ ಹಿಂಪಡೆಯಲು ಮತ್ತು ಪ್ರಕರಣಗಳಲ್ಲಿ ಹಣ ಪಾವತಿ ಬಾಕಿಗೆ ಸಂಬAಧಿಸಿದ ಪಕ್ಷಕಾರರು ಅಥವಾ ನ್ಯಾಯವಾದಿಗಳು ಈ ಜಿಲ್ಲಾ ಗ್ರಾಹಕರ ಆಯೋಗವು ಪ್ರಕಟಣೆ ಹೊರಡಿಸಿದ ದಿನಾಂಕದಿAದ 30 ದಿವಸಗಳೊಳಗಾಗಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಬೇಕು.
ತಪ್ಪಿದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು ಇವರ ಸುತ್ತೋಲೆಯನ್ವಯ ಮೇಲ್ಕಂಡ ಅವಧಿಯ ಪ್ರಕರಣಗಳನ್ನು ನಾಶಪಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.