
ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಯಶಸ್ವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೩- ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ವತಿಯಿಂದ ಅಭಿಜಾತೆ-2024 ಮಹಿಳಾ ಸಮ್ಮೇಳನದ ಅಂಗವಾಗಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಯಶಸ್ವಿಯಾಗಿ ಜರುಗಿತು .
ರವಿವಾರ ಜರುಗಿದ ಈ ಕಾರ್ಯಕ್ರಮ ಆಯೋಜೀಸಲಾಗಿತ್ತು. ಕಾರ್ಯಕ್ರಮದಲ್ಲಿ ಐದು ಭಜನಾ ತಂಡಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಸಂತ ಪೂಜಾರ ಮಾತನಾಡಿ ಅಭಿಜಾತೆ-2024 ಮಹಿಳಾ ಸಮ್ಮೇಳನದಲ್ಲಿನ ಕಾರ್ಯಕ್ರಮಗಳ ಬಗ್ಗೆ ಸಭಿಕರಿಗೆ ವಿವರವಾಗಿ ತಿಳಿಸಿದರು ಹಾಗೂ ಎಲ್ಲರಿಗೂ ಅಭಿಜಾತೆ- 2024 ರಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಬ್ರಾಹ್ಮಣ ಸಮಾಜದ ಪ್ರಮುಖರಾದ ಡಾ.ಕೆ.ಜಿ.ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಣಾಡಿದರು.
ಸಮ್ಮೇಳನದಲ್ಲಿ ಭಾಗವಹಿಸಲು ಅದಕ್ಕೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿರುವ ಜಿಲ್ಲೆಯ ಸಂಚಾಲಕಿ ವೈಷ್ಣವಿ ಹುಲಗಿ, ಲತಾ ಮುಧೋಳ,ಸೌಮ್ಯ ಗುಡಿ,ಸುಮಾ ಹೆಜಿಬ್,ಸೌಮ್ಯ ಪದಕಿ,ಗುರುರಾಜ ಜೋಶಿ,ಹನುಮಂತರಾವ್ ದೇಶಪಾಂಡೆ,ವೇಣುಗೋಪಾಲ ಜಹಗೀರದಾರ ಇತರರು ಇದ್ದರು.