WhatsApp Image 2024-04-26 at 7.43.23 PM

ಜಿಲ್ಲಾ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26 – ಜಿಲ್ಲಾ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಇಂದು ಶನಿವಾರ 27ರಂದು ಸಂಜೆ 5ಕ್ಕೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಜರುಗಲಿದೆ.

ಇತ್ತೀಚಗೆ ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಈ ಅವದಿಗೆ ಅಧ್ಯಕ್ಷರಾಗಿ ಎ ವಿ ಕಣವಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಸಜ್ಜನ್ ,ಕಾರ್ಯದರ್ಶಿಗಳಾಗಿ ಪ್ರಕಾಶ ಹಾದಿಮನಿ, ಖಜಾಂಚಿಯಾಗಿ ರಾಜಾಸಾಬ ಬುದಗುಂಪಾ ಆಯ್ಕೆ ಯಾಗಿದ್ದಾರೆ.

ಈ ಪದಗ್ರಹಣ ಕಾರ್ಯಕ್ರಮಕ್ಕೆ ನ್ಯಾಯವಾದಿಗಳು ಸೇರಿದಂತೆ ಸರ್ವರು ಆಗಮಿಸಿ ಯಶಸ್ವಿಗೋಳಿಸುವಂತೆ ಅಧ್ಯಕ್ಷ ಎ ವಿ ಕಣವಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!