
ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೫- ಜಿಲ್ಲೆಯಲ್ಲಿ ಯೇಸುಕ್ರಿಸ್ತನ ಜನ್ಮ ದಿನದ ಅಂಗವಾಗಿ ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸೋಮವಾರ ಸಂಭ್ರಮದ ಕ್ರಿಸ್ಮಸ್ ಆಚರಿಸಲಾಯಿತು.
ಕ್ರಿಸ್ತಜ್ಯೋತಿ ಇವ್ಯಾಂಜೆಲಿಕಲ್ ಚರ್ಚ್ ಆ್ ಇಂಡಿಯಾ ಕೊಪ್ಪಳ ಶಾಖೆ, ಭಾಗ್ಯನಗರ ಸೇರಿ ಇತರೆಡೆ ಯೇಸುಪ್ರಭುವಿನ ಆರಾಧನೆ ನಡೆಯಿತು. ರಾದರ್ ರೆವರೆಂಡ್ ಜೆ.ರವಿ ಶುಭ ಸಂದೇಶ ನೀಡಿ ಮಾತನಾಡಿ, ಯೇಸುಕ್ರಿಸ್ತರು ನಿಮಗೆಲ್ಲ ಶುಭ ತರಲಿ ಎಂದರು.
ಎಲ್ಲರ ಬಾಳಿನಲ್ಲಿ ಶಾಂತಿ, ನೆಮ್ಮದಿ ಇರಲಿ. ಮನುಕುಲದ ಒಳಿತಿಗಾಗಿ, ಜನರ ಸಂಕಷ್ಟಗಳನ್ನು ದೂರ ಮಾಡಲು ಯೇಸುಪ್ರಭು ಮನುಷ್ಯರಾಗಿ ಜನ್ಮ ತಾಳಿದರು. ಶಾಂತಿಯುತ ಜೀವನ ಸಾಗಿಸಲು ಬೇಕಾಗುವ ಸಂದೇಶವನ್ನು ನಮಗೆಲ್ಲ ನೀಡಿದ್ದಾರೆ. ನಾವೆಲ್ಲ ಅದನ್ನು ಅನುಸರಿಸೋಣ ಎಂದರು.
ತಾಲೂಕಿನ ಭಾಗ್ಯನಗರದ ನವನಗರದಲ್ಲಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಿಸಲಾಯಿತು. ಕೆಸ್ತರು ಚರ್ಚ್ಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮಕ್ಕಳು ಹೊಸಬಟ್ಟೆ ತೊಟ್ಟು, ಸಾಂಟಾ ವೇಶದಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು.
ಕ್ರಿಸ್ಮಸ್ ಅಂಗವಾಗಿ ಮನೆ ಮನೆಗೆ ತೆರಳಿ ಶುಭ ಸಂದೇಶ ಯಾತ್ರೆ ನಡೆಸಲಾಯಿತು. ಎಂ.ಶಾಂತರಾಜ, ಎಂ.ಇಸ್ರಾಯಲ್ ನಾಡರ್, ಸಾಮುವೇಲಪ್ಪ ಬಾವಿಮನಿ, ಸುನಿತಾ ಸುದರ್ಶನ, ಎಂ.ಪ್ರಕಾಶ ಇತರರು ಈ ಸಂದರ್ಭದಲ್ಲಿ ಇದ್ದರು.