WhatsApp Image 2024-02-09 at 3.49.25 PM

ಜೀತ ಪದ್ದತಿ ರದ್ದತಿ ದಿನಾಚರಣೆ-ಜಾಗೃತಿ ಜಾಥಾ

ಕರುನಾಡ ಬೆಳಗು ಸುಸದ್ದಿ

ಕೂಡ್ಲಿಗಿ,9- ನ್ಯಾಯಾಂಗ ಇಲಾಖೆ, ಕಾನೂನು ಸೆವಾ ಸಮಿತಿ, ಕಾರ್ಮಿಕ ಇಲಾಖೆ, ತಾಲೂಕು ಆಡಳಿತ ಹಾಗೂ ವಿವಿದ ಇಲಾಖೆಗಳ ಸಹಯೋಗದೊಂದಿಗೆ. ಜೀತ ಪದ್ಧತಿ ರದ್ದತಿ ದಿನಾಚರಣೆ ಆಚರಿಸಲಾಯಿತು.

ಜಾಗೃತಿ ಜಾಥವನ್ನು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಹಾಲಕ್ಷ್ಮಿರವರು, ಹಸಿರು ನಿಶಾನೆ ತೋರಿ ಜಾಥಾಕ್ಕೆ ಚಾಲನೆ ನೀಡಿದರು.

ನ್ಯಾಯಾಲಯ ಇಲಾಖೆಯ ಶಿರಸ್ಥೇದಾರರಾದ, ನಾಗರಾಜರವರು ಜೀತ ಪದ್ಧತಿ ರದ್ದತಿ ಕುರಿತು ಸಂಕಲ್ಪತೊಡುವ ಪ್ರಮಾಣ ವಚನವನ್ನು ಭೋದಿಸಿದರು. ನಂತರ ಜಾಥಾವು ಪಟ್ಟಣದ ಮದಕರಿ ವೃತ್ತ ತಲುಪಿತು, ಸಾರ್ವಜನಿಕರನ್ನುದ್ದೇಶಿಸಿ ಹೋರಾಟಗಾರರು ಹಾಗೂ ಪ್ಯಾನಲ್ ವಕೀಲರಾದ ಸಿ. ವಿರುಪಾಕ್ಷಪ್ಪ ಮಾತನಾಡಿದರು. ಜೀತಪದ್ಧತಿ ವಿರುದ್ಧ ಜಾರಿಯಲ್ಲಿರುವ ಕಾನೂನು ತಿಳುವಳಿಕೆಯನ್ನ ನೀಡಿದರು, ಮತ್ತು ಸಮಾಜಕ್ಕೆ ಅನಿಷ್ಠವಾದ ಜೀತ ಪದ್ಧತಿಯನ್ನು ನಿರ್ಮೂಲನೆಗೆ ಎಲ್ಲರೂ ಬದ್ಧರಾಗಬೇಕಿದೆ.

ಈ ನಿಟ್ಟಿನಲ್ಲಿ ಪ್ರಜ್ಞಾವಂತರು, ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಬೇಕೆಂದು ಕರೆ ನೀಡಿದರು. ತಾಲೂಕು ಪಂಚಾಯ್ತಿ ಇ ಓ ವೈ.ರಮೇಶ, ಕಾರ್ಮಿಕ ಅಧಿಕಾರಿ ಮಂಜುಳಾ, ವಕೀಲರ ಸಂಘದ ಅಧ್ಯಕ್ಷ ಜಿ.ಎಂ. ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಮಾತನಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಪಿಎಸ್ಐ ಮಹಾಂತೇಶ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು. ವಿವಿದ ಇಲಾಖೆಗಳ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕಾನೂನು ಸೇವಾ ಸಮಿತಿ ಸಿಬ್ಬಂದಿ. ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು. ಹಿರಿಯ ವಕೀಲರು. ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!