
ಜೀತ ಪದ್ಧತಿ ನಿರ್ಮೂಲನ ದಿನ ಆಚರಣೆ ಮಾನವ ಹಕ್ಕುಗಳ ಉಲ್ಲಂಘನೆ ಅಪರಾಧ ಪವನ್ ಕುಮಾರ್ ಎಸ್ ದಂಡಪ್ಪನವರ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ಜೀತ ಪದ್ಧತಿಯಲ್ಲಿ ಹಾಗೂ ವರ್ತಮಾನದಲ್ಲಿ ಮಾನವ ಕಳ್ಳ ಸಾಗಾಣಿಕೆ ಇಂತಹ ಮಾನವ ಹಕ್ಕುಗಳ ಉಲ್ಲಂಘನೆ ಅಪರಾಧ ತಡೆಗಳಿಗಾಗಿ ಜೀತ ಪದ್ಧತಿ ರದ್ದತಿ ಕಾಯ್ದೆ 1976 ರನ್ನು ದೇಶಾದ್ಯಂತ ಜಾರಿ ಮಾಡಲು 1976ರ ಫೆಬ್ರವರಿ 9ರಂದು ಅಂದಿನ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಅವರು ಹೇಳಿದರು.
ನಗರದ ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಪಂಚಾಯತ್ ಸಿರುಗುಪ್ಪ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ದಲ್ಲಿ ಜೀತ ಪದ್ಧತಿ ನಿರ್ಮೂಲನ ದಿನ ಆಚರಣೆಯ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಿ ಹಸಿರು ಸಸಿಗೆ ನೀರು ಎರೆಯುವ ಮೂಲಕ ಅವರು ಮಾತನಾಡಿ ಜೀತ ಪದ್ಧತಿ ರದ್ದತಿ ಗೊಳಿಸಲು ಪ್ರತಿಜ್ಞಾವಿಧಿ ಕರ್ನಾಟಕವನ್ನು ಜೀತ ವಿಮುಕ್ತ ಗೊಳಿಸಲು ಸಂಕಷ್ಟದಲ್ಲಿರುವ ಸಮುದಾಯಗಳ ಜನರಿಗೆ ನ್ಯಾಯವನ್ನು ಒದಗಿಸಲು ನನ್ನ ಸೇವೆಯನ್ನು ಈ ಮೂಲಕ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ಎಂದು ಅವರು ಬೋಧಿಸಿದರು.
ವಕೀಲರ ತಂಡದ ಹಿರಿಯ ವಕೀಲರಾದ ಎನ್ ಅಬ್ದುಲ್ ಸಾಬ್ ರಾರಾವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಗೀತಾ ವಿಮುಕ್ತರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ವಿದ್ಯಾರ್ಥಿ ವೇತನಗಳನ್ನು ನೀಡುವುದನ್ನು ಮಾಡಬೇಕು ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣದ ಅರ್ಥಪೂರ್ಣವಾಗಿ ವಿದ್ಯಾವಂತರಾಗಿ ಮಾಡಬೇಕು ಎಂದರು.
ಪ್ಯಾನಲ್ ವಕೀಲರಾದ ವೆಂಕಟೇಶ್ ನಾಯಕ ಅವರು ಆರಂಭದಲ್ಲಿ ಪ್ರಾರ್ಥಿಸಿ ಸ್ವಾಗತ ಬಯಸಿ ಕಾರ್ಯಕ್ರಮ ನಿರೂಪಿಸಿದರು ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕ ಬಸವರಾಜ, ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಎ ಅಬ್ದುಲ್ ನಬಿ, ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ ಕೋರಿ, ಕಾರ್ಮಿಕ ಇಲಾಖೆಯ ಅಧಿಕಾರಿ, ಜೀತ ಮುಕ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿತರ ಸಂಘ ಸಂಸ್ಥೆಯಯವರು ಪಾಲ್ಗೊಂಡಿದ್ದರು.