WhatsApp Image 2024-04-21 at 5.40.21 PM

ಜೀವನಮಟ್ಟ ಸುಧಾರಣೆಗಾಗಿ ಕಾಂಗ್ರೆಸ್‌ಗೆ ಮತ ನೀಡಿ : ಮಾಜಿ ಸಂಸದ ಸಂಗಣ್ಣ ಕರಡಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 21- ಜನರ ಜೀವನ ಮಟ್ಟ ಸುಧಾರಣೆಗಾಗಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಹೇಳಿದರು.

ಭಾನುವಾರ ತಮ್ಮ ನಿವಾಸದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಜತೆಗೆ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಗ್ಯಾರೆಂಟಿ ಯೋಜನೆಯಿಂದ 1.10 ಕೋಟಿ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೊಂಡಿದೆ ಎಂದು ತಿಳಿಸಿದರು.

ಜನತೆಗೆ ನಾನು ಮಾಡಿದ 4 ದಶಕಗಳ ಸೇವೆ ಗುರುತಿಸಿ ಕಾಂಗ್ರೆಸ್ ಪಕ್ಷವು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ಜನರ ಸೇವೆಗೆ ಅಣಿಗೊಳಿಸಿದೆ. ಪಕ್ಷಕ್ಕೆ ನಾನೆಂದೂ ಬದ್ಧನಾಗಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಪ್ರಚಾರ ಪಡಿಸಿ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.

ಕೊಪ್ಪಳ ಸೇರಿದಂತೆ ಎಲ್ಲಡೆ ಕಾಂಗ್ರೆಸ್ ಗಾಳಿ ಬೀಸಿದೆ. ಜಿಎಸ್‌ಟಿ ತೆರಿಗೆ ಕಟ್ಟುವಲ್ಲಿ ರಾಜ್ಯ ದೇಶಕ್ಕೆ 2 ಸ್ಥಾನದಲ್ಲಿದೆ. ಆದರೆ, ಕೇಂದ್ರದಿಂದ ನಿಗದಿ ಪಡಿಸಿದಷ್ಟು ಹಣ ಬರುತ್ತಿಲ್ಲ. ಈ ಬಗ್ಗೆ ಕೇಳಿದರೆ, ಬೇರೆ ಅರ್ಥ ಕಲ್ಪಿಸಿ ನೀಚ ರಾಜಕಾರಣ ಮಾಡುತ್ತಾರೆ.

ನಮ್ಮ ಪಾಲಿನ ಹಣವನ್ನು ನಾವು ಕೇಳುವುದು ತಪ್ಪೇ? ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡುವುದು ಏಕೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹಾಲವರ್ತಿ, ಮೈನಳ್ಳಿ ಸೇರಿ ವಿವಿ

Leave a Reply

Your email address will not be published. Required fields are marked *

error: Content is protected !!