
ಜುವಾಲಜಿ ಲ್ಯಾಬ್ ಅನ್ನು ಪರಿಶೀಲಿನ ಮಾಡಿದ ಅಧ್ಯಕ್ಷರು
ಕರುನಾಡ ಬೆಳಗು ಸುದ್ದಿ
ಹೊಸಪೇಟೆ,22- ನಗರದಲ್ಲಿ ಪ್ರತಿಷ್ಠಾತ್ಮಕ ವಿದ್ಯಾ ಸಂಸ್ಥೆಗಳಲ್ಲಿಒಂದಾದ, ವಿಜಯನಗರ ಕಾಲೇಜ್ ( ವಿ ಎಂ ಸಿ ಕಾಲೇಜ್ ), ನಲ್ಲಿ ಜುವಾಲಜಿ ಪರಿಶೋಧನಾ ವಿಭಾಗ, ವನ್ನು ವಿ ಏನ್ ಸಿ ಮಹಾವಿದ್ಯಾಲಯದ, ಅಧ್ಯಕ್ಷರು ಅಸುಂಡಿ ನಾಗರಾಜ್ ಗೌಡ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳ ಪರಿಶೋಧನಕ್ಕೆ ಬೇಕಾಗುವ ಸಾಮಗ್ರಿ ಇದೆಯಾ ಇಲ್ವಾ ಎಂದು ಅಲ್ಲಿನ ಇಂಚಾರ್ಜ್ಗಳನ್ನು ಕೇಳಿ ತಿಳಿದುಕೊಂಡರು. ಅಷ್ಟೇ ಅಲ್ಲದೆ ಇತ್ತೀಚೆಗೆ ತಾನೇ ಮಹಾವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗಾಗಿ ತರಿಸಿದ ಹೊಸ ಬೈನಾಕುಲಾರ್ಸ್ ಮತ್ತು ಇತರ ಸಾಮಗ್ರಿಯನ್ನು ಪರಿಶೀಲನೆ ನಡೆಸಿದರು. ಹೆಚ್ಚು ಓಡಿ ವಿಜಯ್ ಅವರಿಗೆ ಇನ್ನು ಏನಾದರೂ ವಿದ್ಯಾರ್ಥಿಗಳಿಗೆ ಅವಶ್ಯಕತೆ ಸಾಮಗ್ರಿ ಬೇಕಾದರೆ ಕೂಡಲೇ ತರಿಸಿ ಕೊಳ್ಳಬೇಕೆಂದು ತಿಳಿಸಿದರು.
ಪ್ರಯೋಗಾಲಯದಲ್ಲಿ ಯಾವುದೇ ಕೊಂದು ಕೊರತೆ ಇಲ್ಲದೆ ನೋಡಿಕೊಳ್ಳಬೇಕೆಂದು ಅಲ್ಲಿನ ಸಿಬ್ಬಂದಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರೊಫೆಸರ್ ಸುಭಾಷ್, ವಿಭಾಗದ ಹೆಚ್ ಓ ಡಿ ವಿಜಯ್, ಮತ್ತು ಅಸಿಸ್ಟೆಂಟ್ ಪ್ರೊಫೆಸರ್ಗಳಾದ, ಡಾ. ಸುಪ್ರಿಯ, ಮಹಾಂತೇಶ್, ಲ್ಯಾಬ್ ಟೆಕ್ನಿಷಿಯನ್ ಆಸ್ಮಾ ಬಾನು, ಲ್ಯಾಬ್ ಅಸಿಸ್ಟೆಂಟ್ ರಮೇಶ್ ಮತ್ತು ಇತರರು ಉಪಸ್ಥಿತರಿದ್ದರು.