
ಕೊಪ್ಪಳ ಜೈನ ಬಸದಿಯಲ್ಲಿ ಪಲ್ಲಕ್ಕಿ ಉತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ 24- ದುರ್ಗಾಷ್ಟಮಿ ಪ್ರಯುಕ್ತ ಜೈನ ಸಮಾಜದ ಮಹಿಳೆಯರು ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ
ಶ್ರೀ ಪದ್ಮಾವತಿ ದಿಗಂಬರ ಜೈನ ಅಲ್ಪಸಂಖ್ಯಾತರ ಮಹಿಳಾ ಟ್ರಸ್ಟ್ ವತಿಯಿಂದ ಪದ್ಮಾವತಿ ಪಲ್ಲಕ್ಕಿ ಉತ್ಸವ ನೆರವೇರಿಸಿದರು.
ಈ ಸಂದರ್ಭದಲ್ಲಿ ಪದ್ಮಾವತಿ ಮಹಿಳಾ ಮಂಡಳವೂ ಸಹ ಅಸ್ತಿತ್ವಕ್ಕೆಬಂದಿತು.ಕಾರ್ಯಕ್ರಮದಲ್ಲಿ ಜೈನ ಸಮಾಜದ ಮುಖಂಡರಾದ ಸುರೇಂದ್ ಪಾಟೀಲ ಪದ್ಮನಗೌಡ ಪಾಟೀಲ್ ಕಾರ್ಯಕ್ರಮ ಕುರಿತು ಮಾತನಾಡಿದರು.ಜೈನ ಸಮಾಜದ ಮಿಲನ್ ಸಂಘದ ಅಧ್ಯಕ್ಷರಾದ ಪಾಯ್ ಸಾಗರ ಹಾಗೂ ಹುಬ್ಬಳ್ಳಿ ಯ ಶುಭಂ ಜೈನ ಸಮಾಜದ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಅತಿಥಿ ಉಪನ್ಯಾಸಕರಾದ ಸಾಹಿತಿ ಸಾವಿತ್ರಿ ಮುಜುಮದಾರ ಮಾತನಾಡಿ…ಕನ್ನಡ ಸಾಹಿತ್ಯ ದ ಆದಿಕವಿ ಪಂಪನಿಂದ ಮೊದಲ್ಗೊಂಡು ರತ್ನತ್ರಯರಾದ ರನ್ನ ಪೊನ್ನ ಜನ್ನ ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಗೆ ಮುನ್ನುಡಿ ಬರೆದಿದ್ದಾರೆ.ಅತ್ತಿಮಬ್ಬೆ ದಾನಚಿಂತಾಮಣಿ ಎಂದು ಪ್ರಸಿದ್ಧಳಾಗಿದ್ದಾಳೆ.ಕೊಪ್ಪಳ ಜೈನ ಕಾಶಿ ಎಂದು ಹೆಸರು ಪಡೆದಿದೆ.ಒಟ್ಟಾರೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕೊಪ್ಪಳವು ಜೈನ ಧರ್ಮದಿಂದ ಸಮೃದ್ಧಿ ಪಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಾವತಿ ಮಹಿಳಾ ಮಂಡಳದ ಗೌರವ ಅಧ್ಯಕ್ಷರಾದ ವಜ್ರಾವತಿ ಪಾಟೀಲ್, ಅಧ್ಯಕ್ಷರಾದ ಜ್ಯೋತಿ.ಪಿ.ರಂಗೋಳಿ, ಉಪಾಧ್ಯಕ್ಷರಾದ ಪದ್ಮಾವತಿ ಸಾಗರ ಚಿಂದೆ, ಕಾರ್ಯದರ್ಶಿ ಸನ್ಮತಿ.ಎಂ.ಪಾಟೀಲ್, ಖಜಾಂಚಿ ಶ್ರೀದೇವಿ.ಎಸ್.ಪಾಟೀಲ್ ಹಾಗೂ ಸಲಹೆಗಾರರಾದ ಸುಧಾ ಪಾಟೀಲ್ ಹಾಗು ಶ್ವೇತಾ ತುಂಬಾಳ ಉಪಸ್ಥಿತರಿದ್ದರು.ಮಹಿಳಾ ಮಂಡಳಿ ಅಧ್ಯಕ್ಷೆ ಮಾತನಾಡಿ ಈ ಮಹಿಳಾ ಮಂಡಳ ವತಿಯಿಂದ ಮುಂಬರುವ ದಿನಗಳಲ್ಲಿ ಸಾಹಿತ್ಯಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಾಗಿ ಮಾತನಾಡಿದರು.ಕಾರ್ಯಕ್ರಮದ ನಿರೂಪಣೆ ತ್ರಿಶಲಾ ಸುರೇಂದ್ರ ಪಾಟೀಲ್, ವಂದನಾರ್ಪಣೆ ಶ್ರೀದೇವಿ ಯವರು ನಡೆಸಿಕೊಟ್ಟರು.ಜೈನ ಸಮಾಜದ ಮಕ್ಕಳಿಂದ ಗಾಯನ ಕಾರ್ಯಕ್ರಮ ನಡೆಯಿತು.