
ಜೈಶ್ರೀ ರಾಮ ಪ್ರಕರಣ:
ಇಬ್ಬರ ಬಂದನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06- ಜಿಲ್ಲೆಯ ಗಂಗಾವತಿ ನಗರದಲ್ಲಿ ಮುಸ್ಲಿಂ ವೃದ್ಧ ಹುಸೇನ್ ಸಾಬ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಬುಧವಾರದ ಸುದ್ದಿಗೋಷ್ಠಿಯಲ್ಲಿ ವಿಚಾರಣೆ ಮುಂದುವರೆಸಲಿದ್ದೇವೆ ಎಂದು ಬುಧವಾರ ಎಸ್ಪಿ ಯಶೋಧ ವಂಟಗೋಡಿ ತಿಳಿಸಿದ್ದಾರೆ.
ಘಟನೆಗೆ ಕಾರಣರಾದವರನ್ನು ಪೊಲೀಸರು ಬಂಧಿಸಿದ್ದು, ಕೋಮುವಾದಕ್ಕೆ ತಿರುಗಿದ್ದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತೀಚಿಗೆ ನ.25ರಂದು ಹುಸೇನ್ ಸಾಬ್ ಹೊಸಪೇಟೆಯಿಂದ ಗಂಗಾವತಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಆತನೇ ಮನೆಗೆ ಬಿಡುವಂತೆ ಆರೋಪಿಗಳನ್ನು ಕೇಳಿ ಸ್ಕೂಟಿ ಹತ್ತಿದ್ದಾನೆ.
ಹೋಗುವಾಗ ಟೋಪಿ ಮುಟ್ಟಿದ್ದರಿಂದ ಹುಸೇನ್ ಸಾಬ್ ಅವರಿಗೆ ಅವಾಚ್ಯವಾಗಿ ಬೈದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಆತನನ್ನು ಸಿದ್ದಿಕೇರಿ ಹೊರ ವಲಯಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ.
ಗಂಗಾವತಿ ನಗರದ ಕುವೆಂಪು ಬಡಾವಣೆಯ ಸಾಫ್ಟ್‌ವೇರ್ ಇಂಜಿನೀಯರ್ ಸಾಗರ್ ಹಾಗೂ ಕಲ್ಲಪ್ಪನ ಕ್ಯಾಂಪ್ ನ ನರಸಪ್ಪ ದನಕಾಯರ ಬಂಧಿತರು ಎಂದು ತಿಳಿದು ಬಂದಿದೆ.
ಬಳಿಕ ಆತನಲ್ಲಿದ್ದ 250ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಉದ್ದೇಶಪೂರ್ವಕವಾಗಿ ಹಲ್ಲೆ ನಡೆದಿಲ್ಲ.
ಆರೋಪಿಗಳಿಗೆ ಸಂಘಪರಿವಾರದ ಹಿನ್ನೆಲೆ ಇಲ್ಲ. ನರಸಪ್ಪನ ವಿರುದ್ಧ ಹಿಂದೆ ಒಂದು ಪ್ರಕರಣ ದಾಖಲಾಗಿದೆ. ಸಾಗರ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋಮು ಸೂಕ್ಷ್ಮವಾಗಿದ್ದ ಪ್ರಕರಣ ಇದಾಗಿದ್ದು, ಗಂಗಾವತಿಯ ಎರಡೂ ಕೋಮಿನ ಜನರು ತನಿಖೆಗೆ ಸಹಕರಿಸಿದ್ದಾರೆ ಎಂದು ಗೋಷ್ಠಿಯಲ್ಲಿ ತಿಳಿಸಿದ್ದಾರೆ.