
ಜ್ಞಾನದ ಬೆಳಕಿಂದ ಆತ್ಮ ಸದಾ ಬೆಳುಗುತಿರಬೇಕು : ಬ್ರ.ಕು.ಉಮಾ ಅಕ್ಕಾ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 24- ಹೊಟ್ಟೆಯ ಹಸಿವನ್ನು ಅನ್ನ ನೀಗಿಸಿದರೆ ನೆತ್ತಿಯ ಹಸಿವು ಜ್ಞಾನಪಡೆಯುವ ಮೂಲಕ ತೀರಿಸಿಕೊಳ್ಳಬೇಕೆಂದು ಬ್ರ.ಕು. ಉಮಾ ಅಕ್ಕನವರು ಹೇಳಿದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬ್ರಕು ಸರಸ್ವತಿ (ಮಮ್ಮಾ)ಸ್ಮ್ರುತಿ ದಿನಾಚರಣೆ ಯಲ್ಲಿ ಮಾತನಾಡಿದ ಅವರು ಮಮ್ಮಾರವರ ಆದರ್ಶ ನಮಗೆಲ್ಲಾ ಮಾದರಿ ಆಗಬೇಕಾಗಿದೆ.
ಜೀವನದಲ್ಲಿ ನಮ್ಮದೆ ಅದಪಾತ್ರ ಇರುತ್ತದೆ. ಆದರೆ ಆ ಪಾತ್ರವನ್ನು ನಾವು ಸರಿಯಾಗಿ ನಡೆಸುತ್ತಿರುವಲ್ಲಿ ನಾವು ವಿಫಲರಾಗಿದ್ದೇವೆ. ಸತ್ಕಾರ್ಯ ಮಾಡಿದಾಗ ನಮಗೆ ಪುಣ್ಯ ಬರುವುದು ಅದು ಸಂಸ್ಕಾರದಿಂದ ಬರುತ್ತದೆ ಆದ್ದರಿಂದ ಒಳ್ಳೆಯವರ ಸ್ನೇಹ ಬೆಳೆಸಿಕೊಳ್ಳಬೇಕು ಎಂದರು.
ಬೇವು ಬಿತ್ತಿ ಬೆಲ್ಲವನ್ನು ಬಯಸಿದಂತೆ ನಮ್ಮ ಬಾಳು ಅಗಬಾರದು. ಅದು ನಿಷ್ಫಲ ಆಗುತ್ತದೆ . ತತ್ವ ಅದರ್ಶದ ಬಾಳು ಪರರಿಗೆ ಮಾದರಿ ಅಗುತ್ತದೆ ಎಂದರು.
ಸಿದ್ದಯ್ಯ ಕೊಣ್ಣೂರು, ಫಕೀರಪ್ಪ ಗಾಣಗೇರ, ಶಿವಕುಮಾರ ನಿಡಗುಂದಿ, ಮಹಾಗುಂಡಪ್ಪ ಕಟಗೇರಿ, ಮುತ್ತಯ್ಯ ಮಲಕಸಮುದ್ರ, ವಿಶಾಲ ನಿಂಗೋಜಿ ಹಾಗೂ ಅನೇಕ ಅಕ್ಕಂದಿರು ಉಪಸ್ಥಿತರಿದ್ದರು.