
ನಿವೇದಿತಾ ವಿದ್ಯಾ ಸಂಸ್ಥೆ (ರಿ)
ಜ,೧೩ ರಂದು ನಿವೇದಿತಾ ಇಂಗ್ಲೀಷ ಮಿಡಿಯಂ ಸ್ಕೂಲ್ ನ
23ನೇ ಶಾಲಾ ವಾರ್ಷಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,೧೦- ನಗರದ ಶ್ರೀ ವಿಠಲ ಮಾದರಿ ನಗರ ನಿವೇದಿತಾ ವಿದ್ಯಾ ಸಂಸ್ಥೆಯ ನಿವೇದಿತಾ ಇಂಗ್ಲೀಷ ಮಿಡಿಯಂ ಸ್ಕೂಲ್ ನ 23ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಜ, 1೩ ರಂದು ಶನಿವಾರ ಸಂಜೆ ೫ಕ್ಕೆ ಜರುಗಲಿದೆ.
ಸರಸ್ವತಿ ಪೂಜೆ: ಶ್ರೀ ಸರಸ್ವತಿ ಪೂಜೆ ಹಾಗೂ ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ೧೨ ರಂದು ಶುಕ್ರವಾರ ಬೆಳಿಗ್ಗೆ ೧೦ ಕ್ಕೆ ಜರುಗಲಿದ್ದು,ಅಥಿತಿಗಳಾಗಿ ಶಿಲ್ಪಿ ಪ್ರಕಾಶ ಕುಮಾರ ಎಸ್ ಆಗಮಿಸಲಿದ್ದು. ನಿವೇದಿತಾ ವಿದ್ಯಾ ಸಂಸ್ಥೆ ಪ್ರಕಾರ್ಯದರ್ಶಿ ನಿತೇಶ ವಿ. ಪುಲಸ್ಕರ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಚೈಲ್ಡ್ ವೆಲ್ ಫೇರ್ ಸದಸ್ಯ ಶ್ರೀಮತಿ ಸರೋಜಾ ಬಾಕಳೆ, ಪಾಲಕರ ಪ್ರತಿನಿಧಿ ಪಾಲಕರ ಪ್ರತಿನಿಧಿಯಾಗಿ ಮಹ್ಮದ್ ರಶೀದ್ ಐ. ಸಿದ್ದಿಕ್, ಅಖಿಲವಾಣಿ ದಿನಪತ್ರಿಕೆ ಮಹ್ಮದ ಅಖಲ್ ಉಡೇವು, ನಿವೇದಿತಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾಬಾಯಿ ಎ. ಪುಲಸ್ಕರ ಆಗಮಿಸಲಿದ್ದಾರೆ.
ಸಂಜೆ ೫ಕ್ಕೆ ಸಾಂಕೃತಿಕ ಕಾರ್ಯಕ್ರಮ ಜರುಗಲಿದ್ದು : ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ ಉದ್ಘಾಟಿಸಲಿದ್ದರೆ, ನಿವೇದಿತಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾಬಾಯಿ ಎ. ಪುಲಸ್ಕರ ಅಧ್ಯಕ್ಷತೆ ವಹಿಸಲಿದ್ದು, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ
ನಗರ ಸಭೆ ಸದಸ್ಯೆ ಶ್ರೀಮತಿ ಶಿವಗಂಗಾ ಶಿವರಡ್ಡಿ ಭೂಮಕ್ಕನವರ , ಅಮ್ಮದ್ ಪಟೇಲ,ನಿವೇದಿತಾ ಇಂಗ್ಲೀಷ್ ಮಿಡಿಯಂ ಸ್ಕೂಲ್ ನ ಮುಖ್ಯೋಪಾಧ್ಯಾಯ ನಿತೇಶ ವಿ. ಪುಲಸ್ಕರ ಇತರರು ಇರಲಿದ್ದಾರೆ.