
ಜ, ೨೦ ರಂದು ಎಜುಕೇರ ಇಂಗ್ಲೀಷ ಮಿಡಿಯಮ್ ಶಾಲಾ ವಾರ್ಷಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭- ನಗರದ ಎಜುಕೇರ ಇಂಗ್ಲೀಷ ಮಿಡಿಯಮ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಜ, ೨೦ ರಂದು ಶನಿವಾರ ಸಂಜೆ ೫ಕ್ಕೆ ಶಾಲೆಯ ಬಳಿ ಜರುಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ನರವೇರಿಸಲಿದ್ದು, ಶಾಲಾ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಪ್ರಭ ಹಿರಿಯ ವರದಿಗಾರ ಸೋಮರೆಡ್ಡಿ ಅಳವಂಡಿ, ನಗರಸಭಾ ಸದಸ್ಯ ಮುತ್ತುರಾಜ ಕುಷ್ಟಗಿ, ಬಸವರಾಜ ನೀರಘಂಟಿ, ನಿವೃತ್ತ ಪ್ರಾಚಾರ್ಯ ಸೋಮನಗೌಡ ಪಾಟೀಲ್ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಕೆಪಿಆರ್ ಕಾರ್ಖಾನೆಯ ಮ್ಯಾನೇಜರ್ ಸತ್ಯನಾರಾಯಣ, ಕರುನಾಡ ಬೆಳಗು ಸಂಪಾದಕ ಸಂತೋಷ ದೇಶಪಾಂಡೆ, ಶಾರದಾ ಇಂಟರ್ ನ್ಯಾಷನಲ್ ಶಾಲೆಯ ಪಿಆರ್ ಓ ಮೃತ್ಯುಂಜಯ ರಾಂಪೂರ, ಅಂಜುಮನ್ ಕಮಿಟಿ ಕಾರ್ಯದರ್ಶಿ ಆಸೀಪ್ ಕರ್ಕಿಹಳ್ಳಿ, ಎಜುಕೇರ್ ಶಾಲಾ ಸಂಸ್ಥೆ ಕಾರ್ಯದರ್ಶಿ ನೀಲಮ್ಮ ಪಾಟೀಲ, ಶಾಲಾ ಸಂಸ್ಥೆ ನಿರ್ದೇಶಕಿ ಶುಭಾಂಗಿ ಎಸ್. ಅವರಾದಿ ಆಗಮಿಸಲಿದ್ದು ಸರ್ವರೂ ಆಗಮಿಸಿ ಯಶಸ್ವಿ ಗೊಳಿಸುವಂತೆ ಶಾಲೆ ಮುಖ್ಯೋಪಾಧ್ಯಾಯರಾದ ಗಿರಿಜಾಪತಿ ಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.