dde51e9a-de9d-4b13-9d41-2f89a58a8312

ಜ, ೪ ರಂದು ಪಯೋನಿಯರ್ ಪಬ್ಲಿಕ್ ಸ್ಕೂಲ್

೯ನೇ ವಾರ್ಷಿಕೋತ್ಸವ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೨- ಇಲ್ಲಿಯ  ಭಾಗ್ಯನಗರದ  ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ  ಪಯೋನಿಯರ್ ಪಬ್ಲಿಕ್ ಸ್ಕೂಲ್ ೯ನೇ ವಾರ್ಷಿಕೋತ್ಸವ ಜ, ೪ ರಂದು ಗುರುವಾರ ಜರುಗಲಿದೆ.

ಅಂದು ಬೆಳಿಗ್ಗೆ 10-00ಗಂಟೆಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಲಿದ್ದು   ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಶಂಕ್ರಯ್ಯ T.S ,ಭಾಗ್ಯನಗರ  ಪಟ್ಟಣ ಪಂಚಾಯತ  ಮುಖ್ಯಾಧಿಕಾರಿ ಸುರೇಶ ಬಬಲಾದಿ ಶಿಕ್ಷಣ ತಜ್ಞರಾದ  ಶ್ರೀಮತಿ ಸುನಂದಾ ಪಂಡಿತ  ಇತರರು ಆಗಮಿಸಲಿದ್ದರೆ.

ಸಾಂಸ್ಕೃತಿಕ ಕಾರ್ಯಕ್ರಮ : ತಮಗೆ ಆತ್ಮೀಯ ಆಮಂತ್ರಣ ಸವಿಜೇನ ಸಿಹಿಸಂಜೆ-2024  ಸಾಂಸ್ಕೃತಿಕ ಕಾರ್ಯಕ್ರಮ  ಸಂಜೆ 05-00ಕ್ಕೆ ಜರುಗಲಿದೆ.  ಜಾನಪದ ವೈಭವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ  ದೇವೇಂದ್ರ K. ಪಂಡಿತ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ   ಶ್ರೀಶೈಲ 5. ಬಿರಾದಾರ ,ಕೊಪ್ಪಳ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ದಿವಾಕರ ಬಾಗಲಕೋಟೆ ಆಗಮಿಸಲಿದ್ದು ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣಸಂಸ್ಥೆ (ರಿ) ಭಾಗ್ಯನಗರದ ಅಧ್ಯಕ್ಷ ಕೃಷ್ಣ ಎಂ. ಇಟ್ಟಂಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಆತ್ಮೀಯ ಸನ್ಮಾನ  :  ಕಾರ್ಯಕ್ರಮದಲ್ಲಿ  ನಿವೃತ್ತ ಜಿಲ್ಲಾ ಖಜಾನಾಧಿಕಾರಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ   A.M. ಮದರಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ   ಶ್ರೀಮತಿ ಹುಚ್ಚಮ್ಮ ಬಸಪ್ಪ ಚೌದರಿ ಅವರಿಗೆ ಸನ್ಮಾನ ಜರುಗಲಿದ್‌ದು ಎಲ್ಲಾ ಕಾರ್ಯಕ್ರಮಗಲಿಗೆ ಆಗಮಿಸಿ ಯಶಸ್ವಿ ಗೊಳಇಸುವಂತೆ  ಸಂಸ್ಥೆಯ ಕಾರ್ಯದರ್ಶಿ ಕೃಷ್ಣಾ ಕಬ್ಬೇರ ಪ್ರಕಟಣೆಯಲ್ಲಿ ಕೋರಿದರು.

Leave a Reply

Your email address will not be published. Required fields are marked *

error: Content is protected !!