
ಜ, ೬ರಂದು ಖಾದರ್ ಲಿಂಗ ಸಾಹೇಬ್ ರವರ ಉರುಸ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ ಜನವರಿ 3 ಪಕ್ಕದ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಜನವರಿ 6ರವರೆಗೆ ಕೌತಾಳಂ ದರ್ಗಾ ಶರೀಫ್ ನ ಖಾದರ್ ಲಿಂಗ ಪೀರ್ ಬಾಬಾ ಸಾಹೇಬ್ರವರ ಎರಡನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯ ಉರುಸು ಆಚರಣೆ ಕಾರ್ಯಕ್ರಮ ಜರುಗಲಿದೆ
ಕೌತಾಳಂ ದರ್ಗಾದ ಪೀಠಾಧಿಪತಿ ಜೈನುಲ್ ಅ ಬಿ ದೀನ್ ಪೀರ್ ಸಾಹೇಬ್ ರವರ ನೇತೃತ್ವದಲ್ಲಿ ಜರುಗಲಿದೆ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉರುಸ್ ಕಾರ್ಯಕರ್ಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ
ಜನವರಿ 4ರ ಗುರುವಾರ ಸಂಜೆ ಗಂಧ ಜನವರಿ ಐದರ ಶುಕ್ರವಾರ ಬೆಳಗ್ಗೆನಿಂದ ಸಂಜೆವರೆಗೆ ಉರುಷ್ ಕಾರ್ಯಕ್ರಮ ಹಾಗೂ ಜನವರಿ 6 ರ ಶನಿವಾರ ಬೆಳಗ್ಗೆ ಜಿಯಾರತ್ ಕಾರ್ಯಕ್ರಮ ನಡೆಯಲಿದೆ ಇದೆ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಸಹಜರುಗಲಿದೆ .
ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆ ಜರುಗಲಿದ್ದು ಭಕ್ತಾದಿ ಸಮೂಹ ಪಾಲ್ಗೊಂಡು ಜಗದ್ಗುರು ಖಾದರ್ಲಿಂಗ ಪೀರ್ ಸಾಹೇಬರ ಆಶೀರ್ವದ ಪಡೆಯಬೇಕೆಂದು ಭಕ್ತ ಮಂಡಳಿಯ ಪದಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.