
ಜ, 27 ರಂದು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ
ಅಜ್ಜನ ಜಾತ್ರೆಗೆ ಈ ಭಾರಿಯ ಉದ್ಘಾಟಕರು ಯಾರು
ಕರುನಾಡ ಬೆಳಗು ಸುದ್ದಿ
ಸಂತೋಷ ದೇಶಪಾಂಡೆ
ಕೊಪ್ಪಳ, 16- ಐತಿಹಾಸಿಕ ರಾಜ್ಯದಲ್ಲಿ ಪ್ರಸಿದ್ಧ ಪಡೆದಿರುವ ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಮಾಹಾರಥೊತ್ಸವ ಜನೆವರಿ 27 ರಂದು ಮಹಾ ರಥೋತ್ಸವ ಜರುಗಲಿದೆ.
ರಾಜ್ಯದಲ್ಲೆ ಹಲವು ಮೊದಲಗಳಿಗೆ ಸಾಕ್ಷಿಯಾಗುವ ಕೊಪ್ಪಳದ ಜಾತ್ರೆ .ಶಿಸ್ತು ಹಾಗೂ ಸ್ವಚ್ಚತೆ ಸೇರಿದಂತೆ ಪ್ರತಿ ಹಂತದಲ್ಲಿ ವಿಷೇಶತೆಗಳನ್ನ ಒಳಗೊಂಡ ಜಾತ್ರೆ ಇದಾಗಿರುತ್ತದೆ.
ಸಿದ್ಧತೆ ; ಜಾತ್ರೆಯ ಅಂಗವಾಗು ಅಭಿನವ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಮಾರ್ಗದರ್ಶನ ದಲ್ಲಿ ಹಲವು ತಂಡಗಳು ಇಗಾಗಲೆ ಜಾತ್ರೆಗೆ ಬರುವ ಭಕ್ತಾದಿಗಳಿಗಾಗಿ ಮಹಾ ದಾಸೋಹ . ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಭಕ್ತಾದಿಗಳ ವ್ಯವಸ್ಥೆಗಾಗಿ ಅಭಿನವ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹಲವು ದಿನಗಳಿಂದ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿದ್ದು. ಪ್ರತಿ ಹಂತದಲ್ಲಿ ಕುದ್ದು ತಾವೆ ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ.
ಮಹಾ ದಾಸೋಹ : ಈ ಭಾರಿಯ ಮಹಾ ದಾಸೋಹದಲ್ಲಿ ಊಟದ ಕೌಂಟರ್ ಗಳನ್ನ ಹೆಚ್ಚಿಸಿದ್ದು ಕಳೆದಭಾರಿಗಿಂತ ಹೆಚ್ಚಿನ ಭಕ್ತರು ಏಕ ಕಾಲಕ್ಕೆ ಪ್ರಸಾದ ಸ್ವೀಕರಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಮಹಾ ದಾಸೋಹ ಸ್ಥಳ ಅಡುಗೆ ಮಾಡಲು ಬೇಕಾಗುವ ಸಿದ್ದತೆ ನಡೆದಿದೆ.
ಅಂತಿಮ ; ಜಾತ್ರಾ ಮಹೋತ್ಸದ ಕೈಲಾಸ ಮಂಟಪದ ಧಾರ್ಮಿಕ ಗೋಷ್ಠಿ ಸೇರಿದಂತೆ ಎಲ್ಲಾ ಅತಿಥಿಗಳು ಹಾಗೂ ಸಾನಿಧ್ಯವಹಿಸುವ ಸ್ವಾಮಿಗಳು ಹೆಸರು ಅಂತಿಮವಾಗಿದ್ದು . ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವ ಗಣ್ಯಅತಿಥಿ ಹೆಸರು ಮಾತ್ರ ಅಂತಿಮವಾಗಬೇಕಿದೆ.
ಉದ್ಘಾಟಕರ ಯಾರು ; ಜಾತ್ರೆಯಷ್ಟೆ ಭಕ್ತರಿಗೆ ಕೂತುಹಲ ಇರುವುದು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವ ಗಣ್ಯರು ಯಾರು ಎಂಬ ಬಗ್ಗೆ ಆದರೆ ಮಹಾರಥೋತ್ಸವಕ್ಕೆ ಯಾರು ಚಾಲನೆ ನೀಡುವರು ಎಂಬ ಗುಟ್ಟನು ಮಾತ್ರ ಶ್ರೀಗಳು ಇನ್ನು ಅಂತಿಮ ಗೊಳಿಸಿಲ್ಲಾ.
ಒಟ್ಟಿನಲ್ಲಿ ಜನರ ಕುತುಹಲದಿಂದ ಕಾಯುತ್ತಿರುವ ಮಾಹ ಮಹಿಮನ ಜಾತ್ರಾ ಮಹೋತ್ಸ ಒಂದು ತಿಂಗಳ ಮಾತ್ರ ಬಾಕಿ ಇದ್ದು ಮಹೋತ್ಸವದಲ್ಲಿ ಇರುವ ವಿಶೇಷತೆಗಳು ಎನು ಎಂಬ ಕುರಿತು ಅಲ್ಲಿಯವರೆಗೆ ಕಾಯಲೆ ಬೇಕು.
ಮಹಾರತೋತ್ಸವ ; ರಥೋತ್ಸವ ಕಾರ್ಯಕ್ರಮ ಜನೆವರಿ 27 ರಂದು ಸಂಜೆ 5 ಕ್ಕೆ ಜರುಗಲಿದೆ.ಜಾತ್ರೆಯ ಅಂಗವಾಗಿ ಜ. 23 ಮಂಗಳವಾರ ದಿಂದ ಜ . 29 ವರೆಗೆ ಎಂಟು ದಿನಗಳಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ತರಕಾರಿ ಹಾಕಲೂ ಸುಸಜಿತವಾಗಿ ಕಟ್ಟಯ ವ್ಯವಸ್ಥೆ ಮಾಡಲಾಗುತ್ತಿದೆ