
ಡಾ.ಬಿ.ಜ್ಞಾನಸುಂದರ ಕಾಂಗ್ರೆಸ್ ಸೇರ್ಪಡೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಜಿಲ್ಲೆಯ ಹಿರಿಯ ದಲಿತ ಚಳುವಳಿಯ ನಾಯಕರು, ಜನಪರ ಹೋರಾಟಗಾರರಾದ ಡಾ.ಬಿ.ಜ್ಞಾನಸುಂದರ ಅವರು ರವಿವಾರದಂದು ಪಕ್ಷದ ಕಛೇರಿಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು, ಅವರನ್ನು ಕೊಪ್ಪಳ ಜನಪ್ರಿಯ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಪಕ್ಷದ ದ್ಜಜ ನೀಡಿ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ ನಾಗರಹಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ನಗರಸಭೆ ಸದಸ್ಯರಾದ ಅಮ್ಜದ ಪಟೇಲ್, ರಮೇಶ್ ಗಿಣಗೇರಿ, ಪಕ್ಷದ ಮುಖಂಡರಾದ ಸಿದ್ದೇಶ್ ಪೂಜಾರ, ರವಿ ಕುರುಗೋಡು, ಜುಲ್ಲು ಖಾದ್ರಿ, ಕೃಷ್ಣಾ ಇಟ್ಟಂಗಿ, ಮಲ್ಲು ಪೂಜಾರ, ಪರುಶುರಾಮ ಕೆರಳ್ಳಿ, ನಿಂಗಪ್ಪ ಮೂಗಿನ್, ಮುದುಕಪ್ಪ ನರೇಗಲ್, ಹಾಗೂ ಅನೇಕರು ಉಪಸ್ಥಿತರಿದ್ದರು.