IMG-20240303-WA0221

ಡಾ.ಷಣ್ಮುಖಯ್ಯ ತೋಟದರವರಿಗೆ ಗುರು ಪುಟ್ಟರಾಜ ಶ್ರೀ ಸದ್ಭಾವನ ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,3- ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಪ್ತ ಸ್ವರದ ಮಹರ್ಷಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 110 ನೇ ಜಯಂತ್ಯೊತ್ಸವದ ಪ್ರಯುಕ್ತ ದಿನಾಂಕ. 03-03-2024 ರಂದು ಗದುಗಿನ ಡಾ.ವ್ಹಿ.ಬಿ. ಹೀರೆಮಠ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನ ಗದಗ ಇವರಿಂದ ಕೊಡುವ ” ಗುರು ಪುಟ್ಟರಾಜ ಶ್ರೀ ಸದ್ಭಾವನ ಪ್ರಶಸ್ತಿ “ಯನ್ನು ಕೊಪ್ಪಳ ತಾಲುಕಿನ ಮೈನಹಳ್ಳಿ ಪುಟ್ಟ ಗ್ರಾಮದ ಡಾ.ಷಣ್ಮುಖಯ್ಯ ತೋಟದರವರಿಗೆ ನೀಡಲಾಯಿತು.

ಇವರ ಸಾಹಿತ್ಯ, ರಂಗಭೂಮಿ, ಕಿರುತೆರೆ ಚಲನಚಿತ್ರ ಸಮಾಜಸೇವೆ ಜೀವಮಾನ ಸಾಧನೆಯ ಗುರುತಿಸಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಕಲ್ಲಯ್ಯಜ್ಜ ನವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ ಆಶೀರ್ವಾದ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಘ.ಮ.ಪು.ಧರ್ಮರತ್ನ ಡಾ. ಕೈಲಾಸನಾಥ ಸ್ವಾಮಿಗಳು ವಿಜಯಪುರ, ಮತ್ತು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವ್ಹಿ.ವ್ಹಿ. ಹಿರೇಮಠ ಮತ್ತು ಡಾ.ಸತೀಶ ಕುಮಾರ .ಎಸ್. ಹೊಸಮನಿ . ನಿರ್ದೆಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು , ಶ್ರೀ ಬಿ.ಎಪ್. ದಂಡಿನ ಇತರ ಅನೇಕ ಗಣ್ಯರು ವೇದಿಕೆ ಮೇಲೆ ಆಸಿನರಾಗಿದ್ದರು.

Leave a Reply

Your email address will not be published. Required fields are marked *

error: Content is protected !!