
ಜ,೧ರಂದು ವೀಕೆಂಡಲ್ಲಿ ಡ್ರಾಮಾ, ಸರಿಗಮಪದ ಜೊತೆ ಕೆಸಿಸಿ ಪಾರ್ಟ್
ಜೀ ಕನ್ನಡ ವಾಹಿನಿಯಲ್ಲಿ 4 ನ ಹೈಲೈಟ್ಸ್, ಮನೋರಂಜನೆಯ ಹಬ್ಬ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೯- ಹೊಸ ವರ್ಷದಿಂದ ಮನೋರಂಜನೆಯ ಹೊಸಪರ್ವ ಶುರು ಮಾಡಲಿರುವ ಜೀಕನ್ನಡ,ಇದಕ್ಕೆಮುನ್ನುಡಿ ಎಂಬಂತೆ ಹೊಸವರ್ಷದ ಆಗಮನಕ್ಕೆ,
ಮನೋರಂಜನೆಯಲ್ಲಿ ಹೊಸತನವನ್ನ ನೀಡುವ ಮುಖಾಂತರ ಸ್ವಾಗತ ಕೋರಲು ಸಕಲ ತಯಾರಿಯನ್ನ ಮಾಡಿಕೊಂಡಿದೆ.
ಕರುನಾಡಿನ ತಂದೆತಾಯಂದಿರ,ಮುದ್ದುಮಕ್ಕಳ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಡ್ರಾಮಾಜೂನಿಯರ್ಸ್ಸೀಸನ್ 5 ಮನೆಮಂದಿಯೆಲ್ಲ ಕಾದುಕುಳಿತು ನೋಡುವ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ, ದೇಶದ ಸಂಸ್ಕೃತಿ ಸಂಸ್ಕಾರದ ಜೊತೆ ನೀತಿಕಥೆಯನ್ನ ಮನೋರಂಜನೆಯ ಮೂಲಕ ಹೇಳುತ್ತ ಬಂದಿರೋ ಈ ರಿಯಾಲಿಟಿ ಶೋ ಈ ವರ್ಷದ ಕೊನೆಯ ವೀಕೆಂಡನ್ನ ಮತ್ತಷ್ಟು ಮನೋರಂಜನಾತ್ಮಕವಾಗಿ ಮಾಡಲು ತನ್ನ ಸುರ್ಧೀಘವಾದ 3 ಗಂಟೆಗಳ ಸಂಚಿಕೆಯನ್ನ ಪ್ರಸಾರ ಮಾಡಲಿದ್ದು ಬೆಂಗಳೂರಿನ ಐತಿಹಾಸಿಕ ಕರಗದ ಕಥೆಯನ್ನ ಈವಾರದ ಸಂಚಿಕೆಯಲ್ಲಿ ಹೇಳಲ್ಲಿದ್ದುಈ ಮಹಾಸಂಚಿಕೆಯು ಇಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
ವೀಕೆಂಡ್ ಮನೋರಂಜನೆಯ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿಯ ಹೆಮ್ಮೆಯ ಕಾರ್ಯಕ್ರಮ ಸರಿಗಮಪ ಸೀಸನ್ 20 ಹೊಸ ವರ್ಷದಂದು ಸತತ4 ಗಂಟೆ 30 ನಿಮಿಷಗಳ ಮಹಾಸಂಚಿಕೆಯನ್ನ ಪ್ರಸಾರ ಮಾಡುವ ಮುಖಾಂತರ ಹೊಸ ವರ್ಷವನ್ನ ಗಾನ ನಮನ,ಸಲ್ಲಿಸಿ ಸ್ವಾಗತಿಸಲು ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ನೀವು ನೋಡಿದ ಹಾಗೆ ಎಂದಿನಂತೆ ಸ್ಪರ್ಧಿಗಳು ಹಾಡುವುದರ ಜೊತೆಗೆ ಈ ಬಾರಿ ಹೊಸತು ಎಂಬಂತೆ ಜೀ ಕನ್ನಡ ವಾಹಿನಿಯ ಜನಪ್ರೀಯ ಧಾರಾವಾಹಿಗಳಾದ ಪಾರು,ಹಿಟ್ಲರ್ ಕಲ್ಯಾಣ,ಸತ್ಯ,ಗಟ್ಟಿಮೇಳ,ಪುಟ್ಟಕ್ಕನಮಕ್ಕಳು,ಅಮೃತಧಾರೆ,ಸೀತಾರಾಮ,ಶ್ರೀರಸ್ತುಶುಭಮಸ್ತು ಮತ್ತು ಭೂಮಿಗೆ ಬಂದ ಭಗವಂತ ಧಾರಾವಾಹಿಗಳ ನಿಮ್ಮನೆಚ್ಚಿನ ಪಾತ್ರಧಾರಿಗಳು ಈ ವಾರದ ಸರಿಗಮಪ ಸಂಚಿಕೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಲ್ಲಿದ್ದಾರೆ.
ಸ್ಪರ್ಧಿಗಳ ಜೊತೆ ಮೈಕ್ ಹಿಡಿದು ಅವರ ರಾಗಕ್ಕೆ ಸ್ವರವಾಗಿ ಹಾಡಲಿರೋ ನಿಮ್ಮ ನೆಚ್ಚಿನ ಕಲಾವಿದರು ಒಂದೆಡೆಯಾದರೆ ನಿಮ್ಮನ್ನ ಈ ಹೊಸ ವರ್ಷದಂದು ಕುಣಿಸೋಕೆ ತಯಾರಿಗಿರೋ ಕಲಾವಿದರ ದಂಡು ಇನ್ನೊಂದಡೆ, ಈ ಎಲ್ಲಾ ಮನೋರಂಜನೆಯ ಜೊತೆ ಈ ವಾರ ಸರಿಗಮದಲ್ಲಿ ನಿರೂಪಣೆಯ ಜವಾಬ್ದಾರಿಯನ್ನ ನಿರೂಪಕಿ ಅನುಶ್ರಿ ಅವರ ಜೊತೆ ಅಕುಲ್ ಬಾಲಾಜಿ ನಿರ್ವಹಿಸಲ್ಲಿದ್ದು, ಸ್ಪೆಷಲ್ ಗೆಸ್ಟ್ ಆಂಕರ್ ಆಗಿ ಸೀತಾರಾಮ ಧಾರಾವಾಹಿ ಖ್ಯಾತಿಯ ಸಿಹಿ ಕೂಡ ಕೆಲವು ಸಮಯ ನಿಮ್ಮನ್ನ ರಂಜಿಸಲಿದ್ದಾರೆ,ಇನ್ನುಳಿದ್ದಂತೆಚಿತ್ರರಂಗ ಮತ್ತು ಕಿರುತೆರೆಯ ಖ್ಯಾತ ಕಲಾವಿದರಾದ ಸುಧಾರಾಣಿ,ವೈಷ್ಣವಿಗೌಡ, ಗಗನ್ ಚಿನ್ನಪ್ಪ ಸೇರಿದಂತೆ ಹಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಾಹಿಸಲ್ಲಿದ್ದಾರೆ.
ನಾಳೆ ರಾತ್ರಿ 7.30 ರಿಂದ 12 ಗಂಟೆಯವರೆಗೆ ಪ್ರಸಾರವಾಗುವ ಜೀ ಕನ್ನಡದ ಸರಿಗಮಪ ಹೊಸವರ್ಷದ ಶುಭಾರಂಭ ಕಾರ್ಯಕ್ರಮದ ಮೂಲಕ,ಈ ಹೊಸ ವರ್ಷವನ್ನ ಸ್ವಾಗತಿಸಲು ಜೀಕನ್ನಡ ಸಿದ್ದತೆ ಮಾಡಿಕೊಂಡಿದೆ.ಇಷ್ಟೆ ಅಲ್ಲದೆ ಜನವರಿ 1,2024 ರಂದು ಬೆಳಿಗ್ಗೆ 10 ಗಂಟೆಯಿಂದ ಕನ್ನಡ ಚಿತ್ರರಂಗದ ಒಗ್ಗಟ್ಟಿನ ಪ್ರದರ್ಶನದ ಕೆಸಿಸಿ ಪಾರ್ಟ್-4 ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲ್ಲಿದ್ದು,ನಿಮ್ಮ ನೆಚ್ಚಿನ ಸೂಪರ್ ಸ್ಟಾರ್ ಗಳಾದ ಡಾ.ಶಿವರಾಜ್ಕುಮಾರ್, ಗಣೇಶ್, ಸುದೀಪ್,ಉಪೇಂದ್ರ,ದುನಿಯಾವಿಜಯ್ ,ಡಾಲಿಧನಂಜಯ್ ಜೊತೆ ಇಂಟರ್ ನ್ಯಾಷನಲ್ ಕ್ರಿಕೇಟರ್ಗಳಾದ .ವಿಜಯ ಭಾರಧ್ವಜ್,ರಾಬಿನ್ ಉತ್ತಪ್ಪ,ಹರ್ಷಲ್ ಗಿಬ್ಸ್,ಸುರೇಶ್ ರೈನಾ,ಬದರಿನಾಥ್, ಮುರುಳಿವಿಜಯ್ ಹಾಗು ದಿಲ್ ಶಾನ್ ಸತತ ಮೂರು ದಿನಗಳ ಕಾಲ ಮನೋರಂಜಿಸಿದ್ದ ಈ ಕ್ರಿಕೇಟ್ ಹಬ್ಬವನ್ನ ಜೀ ಪಿಚ್ಚರ್ ನಲ್ಲಿ ನೇರ ಪ್ರಸಾರ ಮಾಡಿತ್ತು,ಈ ಪಂದ್ಯಾಟವನ್ನ ನೋಡಲು ಮಿಸ್ ಮಾಡಿಕೊಂಡ ಅಭಿಮಾನಿಗಳಿಗಾಗಿ ಜೀ ಕನ್ನಡ ವಾಹಿನಿ ಇದರ ಹೈಲೈಟ್ಸ್ ನ್ನು ಪ್ರಸಾರ ಮಾಡಲಿದ್ದು ಹೊಸ ವರ್ಷದ ಆರಂಭವನ್ನ ನಿಮ್ಮನೆಚ್ಚಿನ ಸೂಪರ್ಸ್ಟಾರ್ ಗಳ ಕ್ರಿಕೇಟ್ ಆಟವನ್ನ ನೋಡುತ್ತ ಶುರುಮಾಡಲು ಜೀ ಕನ್ನಡ ಈ ಕಾರ್ಯಕ್ರಮವನ್ನ ಮರುಪ್ರಸಾರ ಮಾಡುತ್ತಿದೆ.