
ಕೊಪ್ಪಳದಲ್ಲಿ ಲೋಕ ಕಲ್ಯಾಣಕ್ಕಾಗಿ
ಶ್ರೀ ಗಾಯತ್ರಿ ಮತ್ತು ಶ್ರೀ ಮೃತ್ಯುಂಜಯ ಹೋಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೧- ಲೋಕ ಕಲ್ಯಾಣಕ್ಕಾಗಿ ಶ್ರೀ ಗಾಯತ್ರಿ ಮತ್ತು ಶ್ರೀ ಮೃತ್ಯುಂಜಯ ಹೋಮ ಕಾರ್ಯಕ್ರಮ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಡಿ, ೧,೨ ಮತ್ತು ೩ರಂದು ಮೂರುದಿನಗಳ ಕಾಲ ಆಯೋಜಿಸಲಾಗಿದೆ ಎಂದು ಗಾಯತ್ರಿ ಭಕ್ತ ವೃಂದದ ಮುಖಂಡರು ಹಾಗೂ ಬ್ರಾಹ್ಮಣ ಸಮಾಜದ ಪ್ರಮುಖರಾದ ಪಂಡಿತ ಜಯಂತ ಬಂಡು ದೇಸಾಯಿ ಹಾಗೂ ಪಂ, ವಿನಾಯಕ ಸಿದ್ದಾಂತಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಇವರು ಬ್ರಾಹ್ಮಣ ಸಮಾಜ ಹಾಗೂ ಶ್ರೀ ಗಾಯತ್ರಿ ಭಕ್ತ ವೃಂದ ದಿಂದ ಈ ಹೋಮ ಆಯೋಜಿಸಲಾಗಿದೆ.
ಡಿಸೆಂಬರ ೧ ಶುಕ್ರವಾರ ದಂದು ಬೆಳಿಗ್ಗೆ ೮ಕ್ಕೆ ಪುಣ್ಯ ಪ್ರವಚನ ಹಾಗೂ ದೇವತಾ ಸ್ಥಾಪನೆ ,ಮಧ್ಯಹ್ನ ೧೨ಕ್ಕೆ ಶೃೀ ಗಾಯತ್ರ ಹೋಮದ ಪೂರ್ಣಾಹುತಿ ಜರುಗಲಿದ್ದು, ಸಂಜೆ ೭ಕ್ಕೆ ಧಾರವಾಡದ ಡಾ, ವಿ,ಕೆ ಹಂಪಿಹೊಳಿ ಅವರಿಂದ ಪ್ರವಚನ ಜರುಗಲಿದೆ.
ಡಿಸೆಂಬರ ೨ ಶನಿವಾರ ದಂದು ಬೆಳಿಗ್ಗೆ ೬;೩೦ಕ್ಕೆ ಶ್ರೀ ಮೃತ್ಯುಂಜಯ ಹೋಮ ಹಾಗೂಜಪ, ರುದ್ರ ಪಠನ ,ಸಂಜೆ ೫:೩೦ಕ್ಕೆ ಶೃೀ ಹೋಮದ ಪೂರ್ಣಾಹುತಿ ಜರುಗಲಿದ್ದು, ಸಂಜೆ ೬;೩೦ಕ್ಕೆ ಶಿರಸಿಯ ಡಾ,ಸುಪ್ರತೀಕ್ ಭಟ್ ನೀರಗಾನ್ ಅವರಿಂದ ಪ್ರವಚನ ಜರುಗಲಿದೆ.
ಡಿಸೆಂಬರ ೩ ರವಿವಾರ ದಂದು ಬೆಳಿಗ್ಗೆ ೬:೩೦೮ಕ್ಕೆ ದೇವತಾಪೂಜೆ ,ಬೆಳಿಗ್ಗೆ ೮:೩೦ಕ್ಕೆ ಶ್ರೀ ಮೃತ್ಯುಂಜಯ ಪೂರ್ಣಾಹುತಿ ಶ್ರೀಗಳಿಂದ ಆಶೀರ್ವಚನ ಜರುಗಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಹೊಸಪೇಟೆಚಿಂತಾಮಣಿ ಮಠ ಅಮರಾವತಿಯಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಹಾಗೂ ಸಿಂದಗಿ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಮಠದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ವಹಿಸಲಿದ್ದಾರೆ.
ಈ ಎಲ್ಲಾ ಧಾರ್ಮಿಕ ಕಾರ್ಮಕ್ರಮಗಳಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.